ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಈ ಸೌಲಭ್ಯ ಕಲ್ಪಿಸಿ ➤ ಛಾತ್ರ ಯುವ ಸಂಘರ್ಷ ಸಮಿತಿಯಿಂದ ರಾಜ್ಯ ಸರಕಾರಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.05. ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬೇಕಾದರೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಸವಲತ್ತುಗಳನ್ನು ನೀಡಬೇಕು ಎಂದು ಛಾತ್ರ ಯುವ ಸಂಘರ್ಷ ಸಮಿತಿಯ ವತಿಯಿಂದ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದಾದರೆ ಕೆಲವು ನಿಯಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಂಜೂರು ಮಾಡಬೇಕು. ನಂತರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಛಾತ್ರ ಯುವ ಸಂಘರ್ಷದ ವತಿಯಿಂದ ಮನವಿ ಮಾಡಲಾಯಿತು. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ಸು ಪ್ರಯಾಣಗಳನ್ನು ಕರ್ನಾಟಕ ರಾಜ್ಯಾದ್ಯಂತ ಒದಗಿಸಬೇಕು, ಮುಂಬರುವ ವರ್ಷದ ಕಾಲೇಜು ಶುಲ್ಕವನ್ನು 50% ಕಡಿತಗೊಳಿಸಬೇಕು, ಯಾವುದೇ ವಿದ್ಯಾರ್ಥಿಗಳು ಪರೀಕ್ಷಾ ಮತ್ತು ಪ್ರಸ್ತುತ ಸೆಮಿಸ್ಟರ್‌ ಗಳಿಗೆ ಮರು ಮೌಲ್ಯಮಾಪನದ ಶುಲ್ಕವನ್ನು ಪಾವತಿಸುವುದಿಲ್ಲ ಮತ್ತು ಅದನ್ನು ಸರ್ಕಾರವೇ ಭರಿಸಬೇಕು, ಪ್ರತೀ ವಿದ್ಯಾರ್ಥಿಗೆ ಎನ್95 ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಬೇಕು, ಪರೀಕ್ಷೆಯನ್ನು ಕೇವಲ 60% ಪಠ್ಯಕ್ರಮ ಅಥವಾ ಯಾವುದೇ 3/5 ಮಾಡ್ಯೂಲ್‌ಗಳಲ್ಲಿ ನಡೆಸಬೇಕು, ಪರೀಕ್ಷೆಯ ಕಾರಣದಿಂದಾಗಿ ಯಾವುದಾದರೂ ವಿದ್ಯಾರ್ಥಿಗಳಿಗೆ ಕೊರೋನಾ ಬಾಧಿಸಿದರೆ ಅವರ ಖರ್ಚುಗಳನ್ನು ರಾಜ್ಯ ಸರ್ಕಾರ ಭರಿಸಬೇಕು.

Also Read  ರಾಜ್ಯದೆಲ್ಲೆಡೆ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ  ➤ ಹವಾಮಾನ ಇಲಾಖೆ ಮುನ್ಸೂಚನೆ

ಈ ವರೆಗೆ ಮಾಡಿದ ಪಾಠವನ್ನು 2-3 ವಾರಗಳ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಪುನರ್ಮನನ ಮಾಡಿಸಬೇಕು, ಕರ್ನಾಟಕದಲ್ಲಿ ಯಾವುದೇ ವಿದ್ಯಾರ್ಥಿ ಸತ್ತರೆ ಅವರ ಕುಟುಂಬಕ್ಕೆ ಕನಿಷ್ಠ 3 ಕೋಟಿ ಮೊತ್ತವನ್ನು ಪರಿಹಾರವಾಗಿ ನೀಡಬೇಕು. ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಒಪ್ಪಿಕೊಂಡರೆ ಆಗ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುತ್ತಾರೆ, ಇಲ್ಲದಿದ್ದರೆ ಪರೀಕ್ಷೆಯನ್ನು ಮುಂದಕ್ಕೆ ಮಾಡಿ, ವಿದ್ಯಾರ್ಥಿಗಳ ಜೀವ ಉಳಿಸಿ ಎಂದು ಸರಕಾರವನ್ನು ಆಗ್ರಹಿಸಲಾಯಿತು.

Also Read  ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕೇಂದ್ರ ಗೃಹಮಂತ್ರಿ ಷಾ ಪುತ್ರ ಭೇಟಿ

error: Content is protected !!
Scroll to Top