ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ವತಿಯಿಂದ ತರಕಾರಿ ಬೀಜ ವಿತರಣೆ

(ನ್ಯೂಸ್ ಕಡಬ)newskadaba.com ಸುಳ್ಯ. ಜೂ. 5, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುಳ್ಯ ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ವತಿಯಿಂದ ಸುಳ್ಯ ಸುನ್ನೀ ಮಹಲ್ ಕಛೇರಿಯಲ್ಲಿ ವಲಯದ 14 ಯುನಿಟ್ ಗೆ ಬೇಕಾದ ತರಕಾರಿ ಬೀಜಗಳನ್ನು ಕ್ಲಸ್ಟರ್ ಮಟ್ಟದ ನಾಯಕರಿಗೆ ಹಸ್ತಾಂತರ ಮಾಡಲಾಯಿತು.

ವಲಯ ಅಧ್ಯಕ್ಷರಾದ ಜಮಾಲುದ್ದೀನ್ ಕೆ. ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಕ್ಬರ್ ಕರಾವಳಿ, ಕೋಶಾಧಿಕಾರಿ ರಝಾಕ್ ಮುಸ್ಲಿಯಾರ್, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಸುಳ್ಯ ಕ್ಲಸ್ಟರ್ ಅಧ್ಯಕ್ಷರಾದ ರಜಾಕ್, ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್, ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ಮಾಲೆಂಗ್ರಿ, ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಕ್ ಅಡ್ಕ, ಐವರ್ನಾಡು ಯುನಿಟ್ ಅಧ್ಯಕ್ಷರಾದ ಖಾಲಿದ್ ಅಕ್ರಂ, ಬೆಳ್ಳಾರೆ ಯುನಿಟ್ ಅಧ್ಯಕ್ಷರಾದ ಮಹಮ್ಮದ್ ಅಂದ್ರು, ಶಹೀದ್ ಪಾರೆ, ಉಮ್ಮರ್ ಕುಂಡಡ್ಕ ಚೆನ್ನಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯದರ್ಶಿ ಅಕ್ಬರ್ ಸ್ವಾಗತಿಸಿ ವಂದಿಸಿದರು.

Also Read  ಸರಕಾರಿ ಹುದ್ದೆ ಕೊಡಿಸುವುದಾಗಿ ವಂಚನೆ ➤ ದೂರು ದಾಖಲು

error: Content is protected !!
Scroll to Top