ದ.ಕ., ಉಡುಪಿಯಿಂದ ರಾತ್ರಿ ಬಸ್ ಸಂಚಾರ ಆರಂಭ

ಮಂಗಳೂರು, ಜೂ.3: ದ.ಕ. ಮತ್ತು ಉಡುಪಿ ಜಿಲ್ಲೆಗಳಿಂದ ದೂರದ ಊರುಗಳಿಗೆ ಸೀಮಿತವಾಗಿ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳ ರಾತ್ರಿ ಸಂಚಾರ ಆರಂಭವಾಗಿದೆ.

ಕೆಎಸ್ಸಾರ್ಟಿಸಿ ಉಡುಪಿ, ಮಂಗಳೂರು, ಪುತ್ತೂರು ವಿಭಾಗದಿಂದ ರಾತ್ರಿ 9ರ ವರೆಗೆ ಬಸ್ ಸಂಚಾರ ನಡೆಸಲಿದೆ. ಸದ್ಯ ಬೆಂಗಳೂರಿಗೆ ಮಾತ್ರ ಕೊನೆಯ ಬಸ್ ರಾತ್ರಿ 9ಕ್ಕೆ ಸಂಚರಿಸಲಿದೆ.
ಉಡುಪಿ, ಮಂಗಳೂರು ವಿಭಾಗದಿಂದ ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ರಾಯಚೂರು, ಬೆಳಗಾವಿ ಸಹಿತ ದೂರದ ಊರಿಗೆ ರಾತ್ರಿ 8ರ ವರೆಗೂ ಬಸ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಝೈಬುನ್ನಿಸಾ ನಿಗೂಢ ಸಾವಿನ ಸಮಗ್ರ ತನಿಖೆಗೆ ಆಗ್ರಹ ► ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ವತಿಯಿಂದ ಪ್ರತಿಭಟನೆ

ಬೆಂಗಳೂರು ಸಹಿತ ದೂರದ ಊರಿಗೆ ತೆರಳುವ ಖಾಸಗಿ ಬಸ್ ಸಂಚಾರವೂ ಆರಂಭಗೊಂಡಿದೆ. ಸ್ಲೀಪರ್ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

error: Content is protected !!
Scroll to Top