ಮಂಗಳೂರು-ಕಾಸರಗೋಡು ಗಡಿ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಜೂ.4: ಕೊರೋನ-ಲಾಕ್‌ಡೌನ್‌ನಿಂದ ತಡೆಹಿಡಿದಿದ್ದ ಮಂಗಳೂರು-ಕಾಸರಗೋಡು ಗಡಿ ಸಂಚಾರಕ್ಕೆ ಅನುವು ಮಾಡಿ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ನೀಡಿದ್ದಾರೆ.

ಕಾಸರಗೋಡಿನಲ್ಲಿರುವ ಬಹಳಷ್ಟು ಗಡಿನಾಡ ಕನ್ನಡಿಗರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಓಡಾಟ ನಡೆಸುತ್ತಾರೆ. ಇದೇ ಕಾರಣಕ್ಕೆ ಉಭಯ ಜಿಲ್ಲೆಗಳು ಒಂದಕ್ಕೊಂದು ಅವಲಂಭಿತವಾಗಿರುವುದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರಕಾರಿ ನೌಕರರು ಪಾಸ್ ಬಳಸಿ ಸಂಚರಿಸುವಂತೆ ಅವರು ತಿಳಿಸಿದ್ದಾರೆ.

Dkdpermit ಅಗತ್ಯ ಓಡಾಟವಿರುವವರು ವೆಬ್ ಸೈಟ್‌ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚಿಸಲಾಗಿದ್ದು, ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಪಾಸ್‌ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಪ್ರಯಾಣಿಕರು ನಿತ್ಯ ಥರ್ಮಲ್ ಸ್ಕಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿರಲಿದೆ. ಅಲ್ಲದೆ ಈ ಪಾಸ್ ಪಡೆದುಕೊಂಡವರು ಜಿಲ್ಲೆಗೆ ಪ್ರವೇಶ ಪಡೆದ ಸಮಯ ಮತ್ತು ನಿರ್ಗಮನ ಸಮಯ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ನಮೂದು ಮಾಡಬೇಕಾಗುತ್ತದೆ. ಒಂದು ವೇಳೆ ಪಾಸ್ ಪಡೆದಾತ ಜಿಲ್ಲೆಯಿಂದ ಬಂದು ಹೋಗದ ಸಮಯದ ಮಾಹಿತಿ ನೀಡದಿದ್ದರೆ ಅಂಥವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

Also Read  ಅಂತಿಮ ಹಂತ ತಲುಪಿದ ಮಂಗಳೂರು- ಬೆಂಗಳೂರು ರೈಲು ಮಾರ್ಗದ ದುರಸ್ತಿ ಕಾರ್ಯ

error: Content is protected !!
Scroll to Top