ಜು.1ಕ್ಕೆ ಶಾಲೆ ಆರಂಭ ನಿರ್ಧಾರಿತವಲ್ಲ, ಯೋಜಿತವಷ್ಟೇ ➤ ಸುರೇಶ್ ಕುಮಾರ್

(ನ್ಯೂಸ್ ಕಡಬ) newskadaba.com  ಬೆಂಗಳೂರು,ಜು 03: ರಾಜ್ಯದಲ್ಲಿ ಜುಲೈ 1ರಿಂದ ಹಂತ-ಹಂತವಾಗಿ ಶಾಲೆಗಳನ್ನು ಪುನಾರಾರಂಭಗೊಳ್ಳಲು ಉದ್ದೇಶಿಸಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಇದು ನಿರ್ಧಾರಿತ ದಿನಾಂಕವಲ್ಲ, ಯೋಜಿತ ದಿನಾಂಕವಷ್ಟೇ ಎಂದಿದ್ದಾರೆ. ಜುಲೈ 1ಕ್ಕೆ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳುವ ಬಗ್ಗೆ ವರದಿಗಳು ಬಂದಿದ್ದವು. ಇದರಿಂದ ಪೊಷಕರು ಮತ್ತು ಮಕ್ಕಳು ಗೊಂದಲಕ್ಕೆ ಒಳಗಾಗಿದ್ದರು. ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮತ್ತು ಲಾಕ್ಡೌನ್ ತೆರವುಗೊಂಡಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದುಸ್ಸಾಹಸವಾಗಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಕಳವಳಗೊಂಡಿದ್ದರು.

 

 

SSLC ಪರೀಕ್ಷಾ ಸಿದ್ಧತೆ ಪರಿಶೀಲನಾ ಸಭೆ ನಡೆಸಲು ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಶಿಕ್ಷಣ ಸಚಿವ ಸುರೇಶಕುಮಾರ್, ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ ಅಭಿಪ್ರಾಯ ಕ್ರೂಢೀಕರಣಕ್ಕೆ ನಿಧಾ೯ರಿಸಲಾಗಿದೆ. ಪಾಲಕರ ಮತ್ತು ಎಸ್.ಡಿ.ಎಂ.ಸಿ ಸದಸ್ಯರ ಅಭಿಪ್ರಾಯ ಕ್ರೂಡೀಕರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಬಗ್ಗೆ ಜೂನ್ 15ಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಬೇಕು. ನಂತರ ಕೇಂದ್ರ ನೀಡುವ ವರದಿಗೆ ಅನುಸಾರ ನಿರ್ಧಾರ ಮಾಡಲಿದ್ದೇವೆ ಎಂದು ತಿಳಿಸಿದರು.

Also Read  ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️

error: Content is protected !!
Scroll to Top