ಬಡವರ ನೋವಿಗೆ ಸ್ಪಂದಿಸಿದ ಹುಚ್ಚ ವೆಂಕಟ್ ➤ ದಿನಸಿ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ 03: ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್, ಮಟನ್, ಫಿಶ್, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್… ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಪಡಬಾರದ ಕಷ್ಟ ಅನುಭವಿಸಿದ ಪಾನಿಪುರಿ ಅಂಗಡಿ ಮಾಲೀಕನಿಗೆ ದಿನ ಕಿಟ್ ನೀಡಿದ ಹುಚ್ಚ ವೆಂಕಟ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಚಿಕನ್ ಅಂಗಡಿ ಮಾಲೀಕನ ನೋವಿಗೆ ಹುಚ್ಚ ವೆಂಕಟ್ ಸ್ಪಂದಿಸಿದ್ದಾರೆ.

Also Read  ಕನ್ನಡಕ್ಕೆ ಆಪತ್ತು ತರುವ ಶಕ್ತಿ ಇನ್ನೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ ➤ ಸಿಎಂ ಬೊಮ್ಮಾಯಿ

 

ಇನ್ನು ಮೀನುಗಾರರ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಿಸಲು ಹುಚ್ಚ ವೆಂಕಟ್.ಮನವಿ ಮಾಡಿದ್ದಾರೆ. ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಕಿಟ್ ನೀಡಿ ಅವರ ಸೇವೆಯನ್ನ ಸ್ಮರಿಸಿದದ್ದಾರೆ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ ಸಹಾಯ ಹಸ್ತ ಚಾಚಿದ್ದಾರೆ.

 

 

 

error: Content is protected !!
Scroll to Top