(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 4, ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಜೂನ್ 8ರಿಂದ ನಮಾಝ್ ಹಾಗೂ ಮತ್ತಿತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸರಕಾರ ಅನುಮತಿ ನೀಡಿರುವುದು ಸ್ವೀಕಾರಾರ್ಹ. ಈ ಮಧ್ಯೆ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದು ಕೂಡಾ ಸಮುದಾಯದ ಕರ್ತವ್ಯವಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಿರುವ ಆಡಳಿತ ಕಮಿಟಿಯು ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬಹುದು. ಇದರ ಬಗ್ಗೆ ಏನಿದ್ದರೂ ಕೂಡ ಆಯಾ ಜಮಾಅತ್‌ನವರು ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದ.ಕ.ಜಿಲ್ಲಾ ಖಾಝಿ ಅಲ್ಲಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿರ್ದೇಶಿಸಿದ್ದಾರೆ.
ಕೂರೋನ ವೈರಸ್ ರೋಗವು ದಿನ ಕಳೆದಂತೆ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿಶ್ವವೇ ಭಯದ ವಾತಾವರಣದಲ್ಲಿದೆ, ಇಂತಹ ಸಂದರ್ಭದಲ್ಲಿ ನಮಾಝ್ ಗಳನ್ನು ಮನೆಗಳಲ್ಲೇ ನಿರ್ವಹಿಸಲು ಶರೀಅತ್ ಅನುಮತಿಸಿದೆ ಎಂದು ಖಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.