(ನ್ಯೂಸ್ ಕಡಬ) newskadaba.com ಸುಳ್ಯ,ಜೂ. 03: ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದ ಮದುವೆ ಕಾರ್ಯಕ್ರವೊಂದರಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ, ಪ್ರಾಥಮಿಕ ಸಂಪರ್ಕಿತರೊಬ್ಬರು ಭಾಗವಹಿಸಿದ್ದ ಹಿನ್ನಲೆಯಲ್ಲಿ , ಆ ಮದುವೆಯಲ್ಲಿ ಭಾಗಿಯಾಗಿದ್ದವರಿಗೆಲ್ಲ ಹೋಂ ಕ್ವಾರಂಟೇನ್ ಮಾಡುವ ಪರಿಸ್ಥಿತಿ ಎದುರಾಗಿದೆ. ಹೌದು, ಮಲೇಷಿಯದಲ್ಲಿದ್ದ ವೈದ್ಯ ತನ್ನ ಅರಂತೋಡು ಗ್ರಾಮದ ಸಂಬಂಧಿಕರ £ಮನೆಗೆ ಭಾನುವಾರ ಬಂದಿದ್ದರು.
ಆ ವೈದ್ಯರ ಪ್ರಾಥಮಿಕ ಸಂಪರ್ಕಿತದಲ್ಲಿದ್ದ ವ್ಯಕ್ತಿಯು ಸುಳ್ಯದ ಅರಂತೋಡಿನಲ್ಲಿ ನಡೆದ ಮದುವೆ ಕಾರ್ಯಕ್ರವೊಂದರಲ್ಲಿ ಭಾಗವಹಿಸಿದದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಅಷ್ಟೇ ಅಲ್ಲದೆ, ಮದುವೆಯಲ್ಲಿ ಭಾಗಿಯಾಗಿದ್ದ ಸುಮಾರು 62 ಮಂದಿಯ ಹೋಂ ಕ್ವಾರಂಟೇನ್ ಮಾಡಲಾಗಿದ್ದು,47 ಮಂದಿ ಅರಂತೋಡು ಹಾಗೂ 15 ಮಂದಿ ದೊಡ್ಡತೋಟ ದವರು ಎಂದು ಸುಳ್ಯ ತಾ. ಪಂ. ಕಾರ್ಯನಿರ್ವಾಹನ ಅಧಿಕಾರಿ ಭವನಿ ಶಂಕರ್ ರವರು ಮಾಹಿತಿ ನೀಡಿದ್ದಾರೆ. ಇನ್ನು ಮಲೇಷಿಯದಿಂದ ಬಂದಿದ್ದ ವೈದ್ಯರಲ್ಲಿಯೂ ಕೊರೋನಾ ಪಾಸಿಟಿವ್ ಕಂಡು ಬಂದಿದೆ.