ತಲ್ವಾರ್ ದಾಳಿ ನಡೆಸಿ ಯುವಕನ ಹತ್ಯೆ ➤ ಐವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ 02: ಸೋಮವಾರ ಯುವಕನ ಮೇಲೆ ತಲ್ವಾರ್ನಿಂದ ದಾಳಿ ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು ಮೋಕ್ಷಿತ್ ಮತ್ತು ಧನರಾಜ್ ಎಂದು ಗುರುತಿಸಲಾಗಿದೆ.

 

ಸೋಮವಾರ ತಂಡವೊಂದು ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಮಂಗಳೂರಿನ ಮರಕಡ ನಿವಾಸಿ ಕೀರ್ತನ್(20) ಮೃತಪಟ್ಟಿದ್ದು ನಿತಿನ್(20), ಮಣೇಶ್(20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಐವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ತಿಳಿಸಿದ್ದಾರೆ.

Also Read  ಅಕ್ರಮ ಸೇಂದಿ ಮಾರಾಟ ➤ 20 ಲೀ. ಸೇಂದಿ ವಶ, ಆರೋಪಿಗಳು ಪರಾರಿ

 

 

 

error: Content is protected !!
Scroll to Top