ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ➤ ಬಾದೆಟ್ಟು ಪ್ರದೇಶ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜೂ.02 : ಮಹಾರಾಷ್ಟ್ರದಿಂದ ಬಂದು ಕಾರ್ಕಳ ಕ್ವಾರೈಂಟನ್ ನಲ್ಲಿದ್ದು 3 ದಿನಗಳ ಹಿಂದೆ ಬಿಡುಗಡೆಯಾಗಿ ಹೋಮ್ ಕ್ವಾರೈಂಟನ್ನಲ್ಲಿದ್ದ ಪಡುಬಿದ್ರಿ ಪಡುಹಿತ್ಲು ಬಳಿಯ ಬಾದೆಟ್ಟು ಪ್ರದೇಶದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಸೋಕು ಧೃಢವಾಗಿದೆ. 38ರ ಹರೆಯದ ಮತ್ತು 46,16 ಮತ್ತು 40ರ ವಯೋಮಾನದ ಪುರುಷರ ವರದಿ ಸೋಮವಾರ ಬಂದಿದ್ದು,

 

 

 

ಅವರೆಲ್ಲರನ್ನೂ ಉಡುಪಿಯ ಟಿ.ಎಮ್.ಎ ಪೈ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಗಿದ್ದ ಇನ್ನೋರ್ವ ಮಹಿಳೆ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅವರ ಮೂರು ವರ್ಷದ ಮಗು ಕೊರೊನಾ ನೆಗೆಟಿವ್ ಆಗಿದ್ದು ಮುಂಡ್ಕೂರಿನ ಅಜ್ಜಿ ಮನೆಯಲ್ಲಿದೆ.ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಪಡುಬಿದ್ರಿ ಪಿ.ಎಸ್.ಐ ಸುಬ್ಬಣ್ಣ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಬಿ.ಬಿ. ರಾವ್,ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ್, ಗ್ರಾಮ ಲೆಕ್ಕಿಗ ಶ್ಯಾಮ್ ಸುಂದರ್, ಗ್ರಾಮ ಲೆಕ್ಕಿಗ ಅರುಣ್ ಕುಮಾರ್ ಹಾಗೂ ಸಿಬಂದ್ಧಿಗಳು ಬಾದೆಟ್ಟು ಪ್ರದೇಶದ ಪೊಸಿಟಿವ್ ಬಂದಿರುವ ನಾಲ್ಕು ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ.

Also Read  ಪಾರ್ಸೆಲ್ ಕಳುಹಿಸುವ ನೆಪದಲ್ಲಿ 7.63 ಲಕ್ಷ ರೂ. ಪಡೆದುಕೊಂಡು ವಂಚನೆ         ➤ ಪ್ರಕರಣ ದಾಖಲು…!!!

 

 

 

error: Content is protected !!
Scroll to Top