ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ಅಪರಿಚಿತ ಪಾದಚಾರಿ ಮೃತ್ಯು



(ನ್ಯೂಸ್ ಕಡಬ) newskadaba.com ಸುಳ್ಯ, ಜೂ.01. ಕಾರು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.





ಸಂಪಾಜೆ ಕಡೆಯಿಂದ ಸುಳ್ಯದತ್ತ ಆಗಮಿಸುತ್ತಿದ್ದ ಅಡ್ಕಾರಿನ ವ್ಯಕ್ತಿಯೋರ್ವರಿಗೆ ಸೇರಿದ ಹ್ಯುಂಡೈ ಕ್ರೆಟಾ ಕಾರು ಅರಂತೋಡು ಸಮೀಪದ ಬಿಳಿಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಅಪರಿಚಿತ ಪಾದಚಾರಿಯು ರಸ್ತೆ ದಾಟಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿದ್ದುದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಪಾದಚಾರಿಗೆ ಗುದ್ದಿ ರಸ್ತೆಯ ಪಕ್ಕದ ದಿಣ್ಣೆಯ ಮೇಲೆ ತಿರುಗಿ ನಿಂತಿದೆ. ತಕ್ಷಣವೇ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.






error: Content is protected !!
Scroll to Top