ರಾಜ್ಯದಲ್ಲಿ ಇಂದು 187 ಹೊಸ ಕೊರೋನ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ

ಬೆಂಗಳೂರು, ಜೂ.1: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ 187 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ 04 ಹಾಗೂ ಉಡುಪಿಯಲ್ಲಿ 73, ಬೆಂಗಳೂರು ನಗರದಲ್ಲಿ 28, ಕಲಬುರಗಿಯಲ್ಲಿ 24, ಹಾಸನದಲ್ಲಿ 16, ಮಂಡ್ಯದಲ್ಲಿ 15, ಶಿವಮೊಗ್ಗದಲ್ಲಿ 09, ಚಿಕ್ಕಬಳ್ಳಾಪುರದಲ್ಲಿ 05 ಹೊಸ ಕೊರೋನ ಸೋಂಕು ಪ್ರಕರಣ ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,408ಕ್ಕೆ ತಲುಪಿದ್ದು, ಕೊರೋನ ಸೋಂಕಿನಿಂದ ಈವರೆಗೂ 52 ಮಂದಿ ಸಾವಿಗೀಡಾಗಿದ್ದಾರೆ. 2,020 ಕ್ರಿಯಾಶೀಲ ಪ್ರಕರಣಗಳಿದ್ದು, 1,328 ಜನರು ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

Also Read  ಮನೆಯಲ್ಲಿ ನಕರಾತ್ಮಕ ಶಕ್ತಿಗಳು ವಾಮಾಚಾರ ಪ್ರಭಾವವಿದ್ದರೆ ತಪ್ಪದೇ ಈ ನಿಯಮವನ್ನು ಪಾಲಿಸಿ

error: Content is protected !!
Scroll to Top