ನಿವೃತ್ತ ಎಎಸ್‍ಐ ಚಂದಪ್ಪಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ,ಜೂ.1  ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದಪ್ಪ ಅವರು ಆದಿತ್ಯವಾರ ನಿವೃತ್ತರಾದರು.ಪೋಲೀಸ್ ಇಲಾಖೆಯಲ್ಲಿ ನಿರಂತರ 33 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಅವರನ್ನು ಆದಿತ್ಯವಾರ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು. ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಎನ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 

 

ಸಮಾಜದ ಹಿತ ಕಾಪಾಡುವಲ್ಲಿ ಆರಕ್ಷರ ಪಾತ್ರ ಅನನ್ಯ.ಪ್ರಸ್ತುತ ಇರುವಂತಹ ಜಠಿಲ ಪರಿಸ್ಥಿತಿಯಲ್ಲಿ ಜನಹಿತಕ್ಕಾಗಿ ನೆರವೇರಿಸುವ ಕರ್ತವ್ಯವು ಜನಮಾನಸದಲ್ಲಿ ಸದಾ ಹಸಿರಾಗಿರುತ್ತದೆ.ನಿವೃತ್ತಿಯು ಸರಕಾರಿ ಇಲಾಖೆಯಲ್ಲಿ ಸರ್ವೇಸಾಮಾನ್ಯವಾದ ಸಂಗತಿ. ಕರ್ತವ್ಯದ ಅವಧಿಯಲ್ಲಿ ತೋರ್ಪಡಿಸಿದ ಕಾರ್ಯತತ್ಪರತೆಯು ಅಧಿಕಾರಿಗೆ ನಿವೃತ್ತಿಯ ನಂತರವೂ ಹೆಚ್ಚಿನ ಗೌರವವನ್ನು ನೀಡುತ್ತದೆ.ಪ್ರಾಮಾಣಿಕ ಮತ್ತು ಸೌಮ್ಯ ಭರಿತ ಸೇವಾನಿಷ್ಠತೆ ಮೂಲಕ ಚಂದಪ್ಪ ಅವರು ಸರ್ವರಿಗೂ ಮಾದರಿಯಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಠಾಣಾಧಿಕಾರಿ ಓಮನಾ ಎನ್.ಕೆ. ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಠಾಣಾಧಿಕಾರಿಗಳಾದ ಕರುಣಾಕರ, ಜಯಾನಂದ, ಸಿಬ್ಬಂಧಿಗಳಾದ ಸಂಧ್ಯಾಮಣಿ, ರೋಹಿತಾಕ್ಷ, ನಿತ್ಯಾನಂದ ಮಹಮ್ಮದ್ ಇಕ್ಬಾಲ್, ಸಂತೋಷ್, ಪ್ರಕಾಶ್, ಬೀಮಣ ಗೌಡ, ಸಿದ್ದಪ್ಪ ಹೂಗಾರ, ವಿಜಯ ಕುಮಾರ್, ಬಸವರಾಜು, ಅರವಿಂದ, ವಿಠಲ, ಆಕಾಶ, ಕುಮಾರಸ್ವಾಮಿ, ಮಹಾಲಕ್ಷ್ಮಿ, ಮೇಘಾ ಕೆ.ಡಿ, ದಿವ್ಯಾ ಮತ್ತು ಗೃಹರಕ್ಷಕ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Also Read  ರಾಜ್ಯದ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ► ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಗೆ ಪ್ರತ್ಯುತ್ತರ

 

 

 

error: Content is protected !!
Scroll to Top