ಭಾರತದ ಗಡಿ ನುಸುಳಲು ಯತ್ನ ➤ 3 ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ರಜೌರಿ,ಜೂ.1 : ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನ ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ.
ಪಾಕಿಸ್ತಾನ ತರಬೇತಿ ನೀಡಿರುವ ಹಲವು ಉಗ್ರರು ಈಗಾಗಲೇ ಭಾರತದ ಗಡಿ ನುಸುಳಲು ಸಿದ್ಧವಾಗಿ ನಿಂತಿದ್ದು. ಮೇ.28 ರಿಂದ ಗಡಿ ನುಸುಳಲು ಸತತ ಯತ್ನ ನಡೆಸುತ್ತಲೇ ಇದ್ದಾರೆ.

 

ಇದರಂತೆ ನೌಶೆರಾ ಸೆಕ್ಟರ್ ಬಳಿಕ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಗಡಿ ನುಸುಳಲು ಯತ್ನ ನಡೆಸಿದ ಮೂವರು ಪಾಕಿಸ್ತಾನದಿಂದ ತರಬೇತಿ ಪಡೆದಿದ್ದ ಉಗ್ರರನ್ನು ಸೇನಾಪಡೆಗಳು ಹತ್ಯೆ ಮಾಡಿದೆ. ಪ್ರಸ್ತುತ ಸ್ಥಳದಲ್ಲಿನ್ನೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.  ಈ ಹಿಂದೆ ಪುಲ್ವಾಮದಲ್ಲಿ ಭಾರೀ ಪ್ರಮಾಣದ ಮತ್ತೊಂದು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದ ವಾಹನವೊಂದನ್ನು ಪತ್ತೆಹಚ್ಚುವ ಮೂಲಕ ಉಗ್ರರ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು.

Also Read  ಇರಾನ್‌ ನ ಮಿಲಿಟರಿ ವಿರುದ್ಧ ಇಸ್ರೇಲ್ ದಾಳಿ

 

 

error: Content is protected !!
Scroll to Top