ಇನ್ಮುಂದೆ ಭಾನುವಾರ ಸೆಲೂನ್ ಕ್ಲೋಸ್ ➤ ದ.ಕ ಹಾಗೂ ಉಡುಪಿ ಗೆ ಅನ್ವಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ 01: ಲಾಕ್ ಡೌನ್ ಘೋಷಣೆಯಾದ ಬಳಿಕ ಅಂತಿಮವಾಗಿ ಸಲೂನ್ ಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಹಲವು ನಿಯಮ ಪಾಲನೆ ಹಾಗೂ ಪ್ರತಿಯೊಬ್ಬ ಗ್ರಾಹಕನಿಗೂ ಬಳಸಿ ಎಸೆಯಬಹುದಾದ ಟವೆಲ್ , ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ಸೂಚಿಸಿ ಸರ್ಕಾರ ಅನುಮತಿ ನೀಡಿತ್ತು.ಕರಾವಳಿಯಲ್ಲಿ ಸೆಲೂನ್ ಇನ್ಮುಂದೆ ಭಾನುವಾರ ತೆರೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜ ಹೇಳಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈವರೆಗೆ ಮಂಗಳವಾರ ರಜೆ ಇರುತ್ತಿತ್ತು.

 

ಆದರೆ ಇನ್ಮುಂದೆ ವಾರದ ರಜೆಯ ದಿನವನ್ನು ಬದಲಾವಣೆ ಮಾಡಬೇಕಾಗಿದ್ದು ಮಂಗಳವಾರದ ರಜೆ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಂಗಳವಾರದ ಬದಲು ರವಿವಾರ ವಾರದ ರಜೆ ಇರುತ್ತದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮಂಗಳವಾರದ ಬದಲು ಭಾನುವಾರ ರಜೆ ನೀಡುವ ತೀರ್ಮಾನ ಎರಡು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ವಾರದ ರಜೆ ಬದಲಾವಣೆ ಮಾಡುವ ಕುರಿತು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ.

Also Read  ಮೀನುಗಾರಿಕಾ ಬೋಟು ದುರಂತ ➤ ಮೀನಿನ ಬಲೆಯಲ್ಲಿ ಮೀನುಗಾರನ ಶವ ಪತ್ತೆ

 

 

error: Content is protected !!
Scroll to Top