ಕರಾವಳಿಯಲ್ಲಿ “ಆರೆಂಜ್ ಅಲರ್ಟ್’ ➤ ಭಾರೀ ಮಳೆಯಾಗುವ ಮುನ್ಸೂಚನೆ

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ.1 : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ “ಆರೆಂಜ್ ಅಲರ್ಟ್’ ಘೋಷಿಸಿದ್ದು, ಮಳೆರಾಯನ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ . ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಜೂ. 1 ಮತ್ತು 2ರಂದು ಕರಾವಳಿ ಭಾಗದಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗುಡುಗು ಮತ್ತು ಗಾಳಿ ಕೂಡ ಹೆಚ್ಚಾಗಿರಲಿದೆ ಎಂದು ತಿಳಿಸಿದೆ.ಜೂ. 3ರಂದು ಗುಜರಾತ್ ರಾಜ್ಯದತ್ತ ಮಳೆ ಸಂಚರಿಸಲಿದೆ.

 

ಇದು ಮುಂಗಾರು ಮೇಲೆ ಪರಿಣಾಮ ಬೀರಲಿದ್ದು, ಸೋಮವಾರ ಕೇರಳ ರಾಜ್ಯ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಇದಾದ ಮರುದಿನ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರದಂದು ಮಳೆಯಾದ ವರದಿಯಾಗಿದೆ. ಜೂ.4ರಂದು ಜಿಲ್ಲೆಗೆ  ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪ ವನ್ನು ಸಮರ್ಪಕವಾಗಿ ಎದುರಿಸಲು NDRF (ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್ ಜೂ. 4ರಂದು ದ.ಕ. ಜಿಲ್ಲೆಗೆ ಆಗಮಿ ಸಲಿದೆ.  ಕೊಡಗು ಜಿಲ್ಲೆಯಲ್ಲೂ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಜೂ. 1ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Also Read  ನಾಳೆ‌ ಬಿ.ಸಿ.ರೋಡ್ ನಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ

 

 

 

ದ.ಕ.: ತುರ್ತು ಸೇವೆಗೆ ಕಂಟ್ರೋಲ್ ರೂಂ
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಮುಂಜಾಗ್ರತಾ ದೃಷ್ಟಿಯಿಂದ ದ.ಕ. ಜಿಲ್ಲಾಡಳಿತ 24 ಗಂಟೆಗಳ ಕಂಟ್ರೋಲ್ ರೂಂ. ವ್ಯವಸ್ಥೆ ಕಲ್ಪಿಸಿದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077ಗೆ ಕರೆ ಮಾಡಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Also Read  ಕಡಬ: ತ್ಯಾಜ್ಯ ಸಾಗಾಟಕ್ಕೆ ಟೆಂಪೊ ವಾಹನ ಒದಗಿಸುವಂತೆ, ಪ್ರವಾಸಿ ಮಂದಿರ ದುರಸ್ತಿಗಾಗಿ► ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ

 

 

error: Content is protected !!
Scroll to Top