(ನ್ಯೂಸ್ ಕಡಬ) newskadaba.com ದೆಹಲಿ,ಜೂ.1 : ಕೊರೊನಾ ವೈರಸ್ ಸಾಂಕ್ರಾಮಿಕ ರೋಗ, ಲಾಕ್ ಡೌನ್ 5.0 ರ ಮೊದಲ ದಿನದಂದು ಸಾಮಾನ್ಯ ಜನರಿಗೆ ದೊಡ್ಡ ಹಿನ್ನಡೆಯಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು LPG ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 11.50 ರೂಪಾಯಿ ಹೆಚ್ಚಾಗಿದೆ.
ಇತರ ನಗರಗಳಲ್ಲಿಯೂ ಸಹ ದೇಶೀಯ LPG ಸಿಲಿಂಡರ್ಗಳ ಬೆಲೆಯನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಈ ಮೊದಲು ಮೇ ತಿಂಗಳಲ್ಲಿ 162.50 ರೂಪಾಯಿವರೆಗೆ ಬೆಲೆ ಇಳಿಕೆಯಾಗಿತ್ತು. ಅದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆ 1139.50 ರೂಪಾಯಿಗೆ ಏರಿದೆ. ಈಗ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ LPG ಸಿಲಿಂಡರ್ನ ಬೆಲೆ 593 ರೂಪಾಯಿಗೆ ಬಂದು ನಿಂತಿದೆ. ಅದು ಈ ಹಿಂದೆ 581.50 ರೂಪಾಯಿಯಿತ್ತು. ಜೂನ್ 1 ರಂದು ವಿಮಾನ ಇಂಧನ ಬೆಲೆಯೂ ಹೆಚ್ಚಾಗಿದೆ.