(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಮೇ.31: ಇಲ್ಲಿನ ಸಮೀಪದ ಶಾಂತಿಬೆಟ್ಟು ನಿವಾಸಿ ಖಂಡಿ ಈಸುಬಾಕ ಎಂದೇ ಚಿರಪರಿಚಿತರಾದ ಕೆ.ಇ ಯೂಸುಫ್ ಶನಿವಾರ ಬೆಳಗ್ಗಿನ ಜಾವ 3:30ಕ್ಕೆ ವಿಧಿವಶರಾದರು. 103 ವಯಸ್ಸಿನ ಯೂಸುಫ್ ನವರು ಸುಮಾರು ಎಂಬತ್ತೈದು ವರ್ಷದಿಂದ ನೆಲ್ಯಾಡಿ ಯಲ್ಲಿ ವಾಸವಾಗಿರುವ ಇವರು ಊರಿನ ಸರ್ವ ಧರ್ಮೀಯರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದ ದಿಂದ ಬದುಕಿದ ವೆಕ್ತಿತ್ವ ಇವರದು, 5 ಗಂಡು, ಒಂದು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.
ಮೃತರ ಮನೆಗೆ ಎಸ್.ವೈ.ಎಸ್ ರಾಜ್ಯ ನಾಯಕರಾದ ಹಂಝಾ ಮದನಿ ಮಿತ್ತೂರು, ಉಪ್ಪಿನಂಗಡಿ ಡಿವಿಷನ್ ಎಸ್ ಎಸ್ ಎಫ್ ಅಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ, ನೆಲ್ಯಾಡಿ ಅಲ್ ಬದ್ರೀಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಶರೀಫ್ ಸಖಾಫಿ, ಮುಹಲ್ಲಿಂ ಒಕ್ಕೂಟ ದ ಹಂಝಾ ಮದನಿ ವಲಾಲು, ಕಡಬ ಸಂಯುಕ್ತ ಮುಸ್ಲಿಂ ಜಮಾಅತ್ ನ ಬಿ.ಎಂ ಉಮ್ಮರ್ ಮುಸ್ಲಿಯಾರ್ ಜಿ.ಪಂ ಸದಸ್ಯರಾದ ಸರ್ವೊತ್ತಮ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ, ಕೆ ಇಬ್ರಾಹಿಂ, ನೆಲ್ಯಾಡಿ ಶಾಲಾ ಮುಖ್ಯೋಪಾಧ್ಯಾಯ ರಾದ ಆನಂದ ಅಜಿಲ, ಉಪನ್ಯಾಸಕರಾದ ತೊಮಸ್ ಎಂ ಐ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರಾದ ಮೊಯಿದೀನ್ ಕುಟ್ಟಿ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್ ನೆಲ್ಯಾಡಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎನ್ ಎಸ್ ಸುಲೈಮಾನ್, ಲೋಕೇಶ್ ಬಾಣಜಾಲು ಎಸ್ ವೈ ಮುಖಂಡರಾದ ಉಮ್ಮರ್ ತಾಜ್, ಇಸ್ಮಾಯಿಲ್ ಎನ್. ಕೆ. ಹಂಝಾ ಸಾಗರ್ ಮೊದಲಾದ ಗಣ್ಯರು ಭೇಟಿ ನೀಡಿದರು.