ಖ್ಯಾತ ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ಒಲಿಂಡಾ ಪಿರೇರಾ ಇನ್ನಿಲ್ಲ➤ ಜೂನ್ 1 ರಂದು ಅಂತಿಮ ಸಂಸ್ಕಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.31: ಖ್ಯಾತ ಸಮಾಜ ಸೇವಕಿ ಹಾಗೂ ಸ್ಕೂಲ್ ಆಫ್ ಸೋಷಿಯಲ್ ವರ್ಕ್ನ ಮಾಜಿ ಪ್ರಾಂಶುಪಾಲೆ ರೋಶ್ನಿ ನಿಲಯ, ಡಾ. ಒಲಿಂಡಾ ಪಿರೇರಾ (95) ಅವರು ಭಾನುವಾರ ನಿಧನರಾದರು. ಅಗಸ್ಟ್ 15, 1925 ರಂದು ಜನಿಸಿದ ಡಾ. ಒಲಿಂಡಾ ಪಿರೇರಾ ಅವರು , ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ವೃದ್ದರ ಆರೈಕೆಗೆ ಸಹಾಯ ಮಾಡುವಲ್ಲಿ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರವರ್ತಕ ಶಿಕ್ಷಣ ತಜ್ಞೆಯಾದ ಇವರು ದೇಶದ ವಿವಿಧ ಭಾಗಗಳಲ್ಲಿ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣದ ಉತ್ತೇಜನಕ್ಕಾಗಿ ಕೆಲಸ ಮಾಡಿದ್ದಾರೆ.

ಮಾರ್ಟಿನ್ ಹಾಗೂ ಲಿಲ್ಲಿ ಅವರ ಮೂರನೇ ಮಗಳಾದ ಡಾ.ಪಿರೇರಾ ಅವರು ಮೈಸೂರಿನ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ, ಮಂಗಳೂರಿನ ಸೈಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಶನ್ನಿಂದ ಬಿ ಟಿ ಮತ್ತು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಿಂದ (ಮದ್ರಾಸ್ ವಿಶ್ವವಿದ್ಯಾಲಯ) ಬಿ.ಎ. ನಂತರ ಅವರು ಫಿಲ್ಲಿಫೈನ್ಸ್ನ ಮನಿಲಾದ ಇನ್ಸ್ಟಿಟ್ಯೂಟ್ ಆಫ್ ವುಮೆನ್ಸ್ ಸ್ಟಡೀಸ್ನಲ್ಲಿ ಇಂಟರ್ನಿ ಆಗಿದ್ದರು. 1979 ರಲ್ಲಿ ಹ್ಯಾಮಿಲ್ಟನ್ನ ಮ್ಯಾಕ್ಮಾಸ್ಟರ್ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ, 1997 ರಲ್ಲಿ ಸೈಂಟ್ ಆಗ್ನೆಸ್ ಕಾಲೇಜಿನಿಂದ ಮಹಿಳಾ ಸಾಧಕ ಪ್ರಶಸ್ತಿ, 2002 ರಲ್ಲಿ ಸಾಮಾಜಿಕ ಸೇವೆಗಾಗಿ ಸಂದೇಶ ಪ್ರಶಸ್ತಿ, 2008 ರಲ್ಲಿ ರಚನಾ ವರ್ಷದ ಮಹಿಳೆ, ವೀರ ರಾಣಿ ಅಬ್ಬಕ್ಕ ಪ್ರಶಸ್ತಿ (ಸಾಮಾಜಿಕ ಸೇವೆಗಾಗಿ) ಹಾಗೂ 2015-16 ಕರವಾಲಿ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು  ಡಾ. ಒಲಿಂಡಾ ಪಿರೇರಾ ರವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಜೂನ್ 1ರಂದು ಸಂಜೆ 3:30ಕ್ಕೆ ರೋಶನಿ ನಿಲಯದ ಧಪನ ಭೂಮಿಯಲ್ಲಿ ನಡೆಯಲಿದೆ

Also Read  ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಯೋಜನೆ ಜಾರಿ ➤ ಸಿಎಂ ಬೊಮ್ಮಾಯಿ

error: Content is protected !!
Scroll to Top