(ನ್ಯೂಸ್ ಕಡಬ) newskadaba.com ಪುತ್ತೂರು,ಮೇ.31: ಪುತ್ತೂರಿನ ಶಿಕ್ಷಣ ಇಲಾಖೆ 1 ರೂಪಾಯಿಯ 3 ನಾಣ್ಯಗಳನ್ನು 30 ರೂಪಾಯಿ ಖರ್ಚು ಮಾಡಿ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿದೆ.ಇದು ನಿಮಗೆ ವಿಚಿತ್ರವೆನಿಸಿದ್ರು ಅದೇ ಸತ್ಯ.
ಹೌದು, ಮಾಹಿತಿ ಹಕ್ಕು ಕಾಯ್ದೆಯಡಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೋರಿ ಕುಂಬ್ರದ ಶಿವಪ್ಪ ರಾಥೋಡ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಮಾಹಿತಿ ಪತ್ರದ ಪ್ರತಿಗೆ 62 ರೂ. ಪಾವತಿಸುವಂತೆ ಇಲಾಖೆ ಅರ್ಜಿದಾರನಿಗೆ ತಿಳಿಸಿತ್ತು. ಆದರೆ ಅರ್ಜಿದಾರ 65ರೂ. ಪಾವತಿಸಿದ್ದರು. ಉಳಿದ 3 ರೂ. ಚಿಲ್ಲರೆಯನ್ನು ಇಲಾಖೆ ವಾಪಸ್ ನೀಡಿರಲಿಲ್ಲ. ಇನ್ನು ಇದನ್ನ ಪ್ರಶ್ನಿಸಿ ಇಲಾಖೆಗೆ ಪತ್ರ ಬರೆದು, ಕಾನೂನು ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದರು. ತಕ್ಷಣ ಸ್ಪಂದಿಸಿದ ಇಲಾಖೆ, ರಾಥೋಡ್ ಅವರಿಗೆ ಲಕೋಟೆಯಲ್ಲಿ 1 ರೂ. ನ 3 ನಾಣ್ಯಗಳನ್ನು ತುಂಬಿಸಿ ರಿಜಿಸ್ಠರ್ಡ್ ಪೋಸ್ಟ್ ಮೂಲಕ ಕಳುಹಿಸಿದೆ.