ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧ ವಿತರಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಮೇ.31: ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸರಕಾರದ ಆಯುಷ್‌ ಇಲಾಖೆ ವತಿಯಿಂದ ಚ್ಯವನಪ್ರಾಶ್‌ ಆಯುರ್ವೇದ ಲೇಹ್ಯ ವನ್ನು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಶನಿವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿ ಯಲ್ಲಿ ಸಾಂಕೇತಿಕವಾಗಿ ವಿತರಿಸಿದರು.ಆಯುಷ್‌ ಇಲಾಖೆಯ ವೈದ್ಯಾಧಿಕಾರಿ ಡಾ| ಮಣಿಕರ್ಣಿಕ ಅವರು ನೇತೃತ್ವ ವಹಿಸಿದ್ದರು.

ಚ್ಯವನಪ್ರಾಶ್‌ ಲೇಹ್ಯವು ಆಯುರ್ವೇದದಲ್ಲಿ ಉಲ್ಲೇಖ ವಾಗಿರುವಂತೆ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಈಗಾಗಲೇ ಕೋವಿಡ್-19 ವಿರುದ್ಧ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ವಿತರಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ 351 ಆಶಾ ಕಾರ್ಯಕರ್ತೆಯರಿಗೂ ಆಯುಷ್‌ ಇಲಾಖೆ ವತಿಯಿಂದ ಇದನ್ನು ವಿತರಿಸಲಾಗುತ್ತದೆ. ಈ ಲೇಹ್ಯದಲ್ಲಿ ನೆಲ್ಲಿಕಾಯಿ, ಅಮೃತಬಳ್ಳಿ, ಅಶ್ವಗಂಧ, ಯಷ್ಟಿಮಧು, ತುಪ್ಪ, ಜೇನುತುಪ್ಪ ಇತ್ಯಾದಿ ಜೀವನೀಯ ಅಷ್ಟ ವರ್ಗ ದ್ರವ್ಯಗಳನ್ನೊಳಗೊಂಡಿದೆ ಎಂದು ಡಾ| ಮಣಿಕರ್ಣಿಕ ಅವರು ತಿಳಿಸಿದರು.

Also Read  ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ

 

error: Content is protected !!
Scroll to Top