ತಂಬಾಕು ಬಳಕೆದಾರರೇ ಎಚ್ಚರ ➤ ಮಾರಣಾಂತಿಕ ಕಾಯಿಲೆಗೆ ತುತ್ತಾಗದಿರಿ

(ನ್ಯೂಸ್ ಕಡಬ) newskadaba.com ಮೇ.31: ವಿಶ್ವಾದ್ಯಂತ ಮೇ 31 ರಂದು ತಂಬಾಕು ರಹಿತ ದಿನ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಾಗಿ ತಂಬಾಕು ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

1987ರಲ್ಲಿ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರ ಗಳು ತಂಬಾಕು ಸೇವನೆಯಿಂದ ಬಾಧಿಸುವ ರೋಗ, ಸಾವು ನೋವುಗಳ ಬಗೆಗೆ ವಿಶ್ವಾ ದ್ಯಂತದ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷದ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುವ ಘೋಷಣೆ ಮಾಡಿದವು. ಜತೆಗೆ ಅದೇ ವರ್ಷ ಮೊದಲ ಬಾರಿಗೆ WHO ತಂಬಾಕು ರಹಿತ ದಿನ ಆಚರಣೆಯ ಬಗ್ಗೆ ಅಧಿಸೂಚನೆ ಹೊರಡಿಸಿತು. ತಂಬಾಕು ಸೇವನೆಯಿಂದ ಮಾರಣಾಂತಿಕ ಕಾಯಿಲೆ ಗೆ ತುತ್ತಾಗಿ ಈಗಾಗಲೇ ಆನೇಕರು ಪ್ರಾಣಕಳೆದುಕೊಂಡಿದ್ದಾರೆ. ಪ್ರತೀ ವರುಷ 80 ಲಕ್ಷ ಜನರು ತಮಬಾಕು ಸೇವನೆಯಿಂದ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಮುಖ್ಯವಾಗಿ ತಂಬಾಕು ಸೇವನೆಯಿಂದ ಸಾವಿರಾರು ಮಂದಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವಾದ್ಯಂತ ತಂಬಾಕು ಸೇವಿಸುವ ಒಟ್ಟಾರೆ 1.3 ಶತಕೋಟಿ ಜನರ ಪೈಕಿ ಶೇ.80ರಷ್ಟು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಪ್ರಜೆಗಳಾಗಿದ್ದಾರೆ.

Also Read  ವಿದ್ಯುತ್ ತಂತಿ ತುಳಿದು 3 ಕಾಡಾನೆಗಳು ಮೃತ್ಯು

 

error: Content is protected !!
Scroll to Top