(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.30. ಯುವಶಕ್ತಿ ಕಡೇಶಿವಾಲಯದ ವತಿಯಿಂದ ಪೆರ್ನೆ ಹಿಂದೂ ಜಾಗರಣ ವೇದಿಕೆ, ಯುವ ಕೇಸರಿ ಗಡಿಯಾರ, ಪೆರಾಜೆಯ ಯುವವೇದಿಕೆಯ ಸಹಕಾರದಿಂದ ಕೊರೋನಾ ಸೋಂಕಿನ ನಡುವೆಯೂ ರೋಗಿಗಳನ್ನು ಸಾಗಿಸುವ 108 ಆಂಬ್ಯುಲೆನ್ಸ್ ನ ಸುಮಾರು 120 ಕ್ಕೂ ಅಧಿಕ ತುರ್ತು ಜೀವರಕ್ಷಕರನ್ನು ಗುರುತಿಸಿ, ಅಭಿನಂದಿಸಿ ಆಹಾರ ಕಿಟ್ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರ ಸಮಕ್ಷಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಅಶ್ರಫ್, ಜಿಲ್ಲಾ ಆಶಾ ಮೇಲ್ವಿಚಾರಕಿ ಶ್ರೀಮತಿ ಕುಮುದಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ತೇಜಶ್ರೀ ಎಸ್. ಶೆಟ್ಟಿ, ನಗರ ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಪಯಸ್ವಿನಿ, ಜಿಲ್ಲಾ RI ಡಾಟಾ ಮ್ಯಾನೇಜರ್ ಶ್ರೀಮತಿ ವಿದ್ಯಾ, 108 ಅಂಬುಲೆನ್ಸ್ ನ ಜಿಲ್ಲಾ ವ್ಯವಸ್ಥಾಪಕ ಮಹಾಬಲ, 108 ವಾಹನ ನಿರ್ವಾಹಕ ವೆಂಕಟೇಶ್, 108 ಅಂಬುಲೆನ್ಸ್ ನ ಗುರುರಾಜ್ ಮತ್ತು ಸದಾಶಿವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮುಖಂಡರಾದ ರವೀಂದ್ರ ಕಂಬಳಿ, ದಿನೇಶ್ ಅಮ್ಟೂರು, ಸತೀಶ್ ಕುಂಪಲ, ಪುಷ್ಪರಾಜ್ ಚೌಟ, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಎಂ.ಪಿ.ದಿನೇಶ್, ವಿದ್ಯಾಧರ ರೈ ಅಮೈ, ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ, ಯುವಕೇಸರಿ ಗಡಿಯಾರದ ಅಧ್ಯಕ್ಷ ಗಣೇಶ್ ಕೆದಿಲ, ಯುವವೇದಿಕೆ ಪೆರಾಜೆ ಅಧ್ಯಕ್ಷ ನಿತಿನ್ ಅರ್ಬಿ ಮೊದಲಾದವರು ಉಪಸ್ಥಿತರಿದ್ದರು.