ಉಡುಪಿ: 13 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಮೇ 30: ಜಿಲ್ಲೆಯಲ್ಲಿಂದು 13 ಹೊಸ ಕೊರೋನ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.

ಇಂದಿನ ಪ್ರಕರಣಗಳ ಪೈಕಿ ಒಬ್ಬರು ತೆಲಂಗಾಣದಿಂದ ಬಂದಿದ್ದರೆ, ಉಳಿದವರೆಲ್ಲಾ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಮಹಾರಾಷ್ಟ್ರದಿಂದ ಪುಣೆಯಿಂದ ಆಗಮಿಸಿದ ಕೋಟದ ಬಾರಿಕೆರೆಯ ಮಹಿಳೆ 14 ದಿನದಿಂದ ಕುಂದಾಪುರದಲ್ಲಿ ಕ್ವಾರಂಟೈನ್ ನಲ್ಲಿದ್ದರು. ಆದರೆ ರಿಪೋರ್ಟ್ ಲಭ್ಯವಾಗುವ ಮುನ್ನವೇ ಮೇ 28 ರಂದು ಸಂಜೆ ಮನೆಗೆ ಬಂದಿದ್ದು, ಮೇ 29ರ ರಾತ್ರಿಯ ವೇಳೆಗೆ ಪಾಸಿಟಿವ್‌ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಶುಕ್ರವಾರ 15 ಜನರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು. ಇಂದು ಮತ್ತೆ 13 ಮಂದಿಗೆ ಸೋಂಕು ತಾಗಿತ್ತು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 177 ಕ್ಕೆ ಏರಿಕೆಯಾಗಿದೆ.

Also Read  ಕಡಬ: ನಿಗೂಢವಾಗಿ ಕಾಣೆಯಾಗಿದ್ದ ಯುವಕ ಪತ್ತೆ

ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕಿನಿಂದ ಗುಣಮುಖರಾದ 17 ಮಕ್ಕಳು ಸೇರಿ 45 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸೋಂಕು ಪತ್ತೆಯಾಗಿದ್ದ ನಾಲ್ವರು ಪೊಲೀಸರು ಕೂಡಾ ಇಂದು ಗುಣಮುಖರಾಗಿ ಬಿಡುಗಡೆಯಾದರು.

error: Content is protected !!
Scroll to Top