ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ: 141 ಹೊಸ ಪ್ರಕರಣ ಪತ್ತೆ

ಬೆಂಗಳೂರು, ಮೇ 30: ರಾಜ್ಯದಲ್ಲಿ ಕೊರೋನ ವೈರಸ್‌ಗೆ ಶನಿವಾರ ಮತ್ತೊಂದು ಬಲಿಯಾಗಿದ್ದು, 141 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ.

ಇಂದು ಹೊಸದಾಗಿ ಪತ್ತೆಯಾದ 141 ಸೋಂಕಿತರ ಪೈಕಿ 90 ಜನರು ಹೊರರಾಜ್ಯದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಬೆಂಗಳೂರು ನಗರ 33, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಶಿವಮೊಗ್ಗ 6,ಕಲಬುರಗಿಯಲ್ಲಿ 2, ಬೆಳಗಾವಿ 1, ದಾವಣಗೆರೆಯಲ್ಲಿ 4, ಬೀದರ್ ನಲ್ಲಿ 10, ಮೈಸೂರಿನಲ್ಲಿ 2, ಉತ್ತರಕನ್ನಡದಲ್ಲಿ 2, ಉತ್ತರ ಕನ್ನಡದಲ್ಲಿ 2, ಧಾರವಾಡದಲ್ಲಿ 2, ಚಿತ್ರದುರ್ಗದಲ್ಲಿ 1, ತುಮಕೂರಿನಲ್ಲಿ 1, ಕೋಲಾರದಲ್ಲಿ 3, ಬೆಂಗಳೂರು ಗ್ರಾಮಾಂತರದಲ್ಲಿ 1,ಹಾವೇರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ ಒಂದೇ ಕುಟುಂಬದ 20 ಜನರಿಗೆ ಸೋಂಕು ಪತ್ತೆಯಾಗಿದೆ.

Also Read  ಸಾಲಮನ್ನಾದ ಹಣವನ್ನು ನೀಡದೆ ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಅನ್ಯಾಯ ➤ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆರೋಪ

ಬೀದರ್‌ನ 47 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 8 ವರ್ಷದಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಇವರು, ಮೇ 24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮೇ 28ರಂದು ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 51ಕ್ಕೇರಿಕೆಯಾಗಿದೆ.

ಇನ್ನು ಶನಿವಾರ ಒಂದೇ ದಿನ 103 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಲಬುರಗಿಯಿಂದ 43, ಬೆಂಗಳೂರು ನಗರದಿಂದ 23, ದಾವಣಗೆರೆ 20, ಕೋಲಾರ 5, ಬಾಗಲಕೋಟೆ 3, ಬೀದರ್ 3 ಮಂದಿ ಚೇತರಿಕೆ ಕಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 997 ಮಂದಿ ಗುಣಮುಖರಾಗಿದ್ದಾರೆ, ಸದ್ಯ ರಾಜ್ಯದಲ್ಲಿ 1,874 ಸಕ್ರಿಯ ಪ್ರಕರಣಗಳಿದ್ದು, 15 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ 15,728 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು ಇಲ್ಲಿಯವರೆಗೆ 2.80 ಜನರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 2,922 ಜನರಿಗೆ ಸೋಂಕು ದೃಢಪಟ್ಟಿದೆ.

error: Content is protected !!
Scroll to Top