ಭಾನುವಾರದ ಕೊರೋನಾ ಕರ್ಫ್ಯೂ ➤ ಈ ಭಾನುವಾರ ಲಾಕ್ಡೌನ್ನಲ್ಲಿ ಏನಿರುತ್ತೆ ಏನಿರಲ್ಲ?

(ನ್ಯೂಸ್ ಕಡಬ) newskadaba.com,ಬೆಂಗಳೂರು ಮೇ.30: ಭಾನುವಾರದ ಲಾಕ್ ಡೌನ್ ಹೆಚ್ಚು ಕಟ್ಟುನಿಟ್ಟಾಗಿ ಜಾರಿಯಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್ ಸೋಂಕು ಹೆಚ್ಚೆಚ್ಚು ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರ ಭಾನುವಾರದ ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ಭಾನುವಾರ ಲಾಕ್ ಡೌನ್ ಇದ್ದರೂ ಜನರು ಆರಾಮವಾಗಿ ಓಡಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇವತ್ತು ಶನಿವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ.

 

ಭಾನುವಾರ ಏನಿರುತ್ತದೆ?
* ಹಣ್ಣು ತರಕಾರಿ, ಮೊಟ್ಟೆ, ಮಾಂಸ, ದಿನಸಿ ಪದಾರ್ಥ ಅಂಗಡಿಗಳಿಗೆ ಅವಕಾಶ
* ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ ತೆರೆದಿರುತ್ತವೆ
* ಮಾಧ್ಯಮಗಳು, ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ…* ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
* ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ

Also Read  ನಾಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆ ► ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ

 

 

ನಿರ್ಬಂಧಗಳೇನು?
* ಸಾರ್ವಜನಿಕರ ಸಂಚಾರ ನಿರ್ಬಂಧ
* ನಗರದಲ್ಲಿ ಮಧ್ಯದಂಗಡಿಗಳು ಬಂದ್
* ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್
* ನಗರದ ಎಲ್ಲಾ ಪ್ರಮುಖ ರಸ್ತೆ ಬಂದ್
* ಬಾರ್, ಸಲೂನ್, ಫ್ಯಾನ್ಸಿ ಸ್ಟೋರ್ ಸೇರಿದಂತೆ ಅಗತ್ಯವಲ್ಲದ ವಸ್ತುಗಳ ಅಂಗಡಿ ಬಂದ್
* ಗಾರ್ಮೆಂಟ್ಸ್ ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು, ಎಲ್ಲಾ ಪಾರ್ಕ್ಗಳ ಕಾರ್ಯನಿರ್ವಹಣೆ ಇಲ್ಲ
* ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್
* ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ

  ಇಷ್ಟು ಕಟ್ಟುನಿಟ್ಟಾಗಿ ಸಂಡೇ ಲಾಕ್ ಡೌನ್ ಅನ್ನು ಜಾರಿಗೆ ತರುವ ಸಾಧ್ಯತೆ ಇದೆ.

Also Read  ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

 

error: Content is protected !!
Scroll to Top