ರಾಜ್ಯದಲ್ಲಿಂದು 248 ಹೊಸ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆ

ಬೆಂಗಳೂರು, ಮೇ 29: ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಹೊಸ 248 ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,781ಕ್ಕೇರಿಕೆಯಾಗಿದೆ. ಇದುವರೆಗೂ 48 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರು ನಗರದಲ್ಲಿ 12, ಮಂಡ್ಯ 02, ಕಲಬುರಗಿ 61, ಯಾದಗಿರಿ 60, ದಾವಣಗೆರೆ 04, ಉಡುಪಿ 15, ಹಾಸನ 04, ಚಿಕ್ಕಬಳ್ಳಾಪುರ 5, ರಾಯಚೂರು 62, ಮೈಸೂರು 02, ವಿಜಯಪುರ 04, ಬಳ್ಳಾರಿ 09, ಧಾರವಾಡ 01, ಚಿತ್ರದುರ್ಗ 01, ಶಿವಮೊಗ್ಗ 01, ತುಮಕೂರು 02, ಚಿಕ್ಕಮಗಳೂರು 02 ಮತ್ತು ಬೆಂಗಳೂರು ಗ್ರಾಮಾಂತರ 01 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

Also Read  ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಮನವಿ

ಈ ವರೆಗೆ 894 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,837 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

error: Content is protected !!
Scroll to Top