ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಯಾದಗಿರಿ, ಮೇ.29: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಮಹಾಸ್ಪೋಟ ಸಂಭವಿಸಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ತಾಗಿರುವುದು ದೃಡವಾಗಿದೆ. ಎರಡು ವರ್ಷದ ಬಾಲಕ, ಮೂರು ವರ್ಷದ ಬಾಲಕಿ ಪಿ ಮತ್ತಿಬ್ಬವರು ಬಾಲಕರಾ ಮತ್ತು ಪಿ -2699, 5 ವರ್ಷದ ಬಾಲಕ ಪಿ-2670, 8 ವರ್ಷದ ಬಾಲಕಿ 2669 ಹಾಗೂ ಬಾಲಕ ಪಿ- 2682 ಸೇರಿ 17 ಜನ ಅಪ್ರಾಪ್ತರಲ್ಲಿ ಸೋಂಕು ವಕ್ಕರಿಸಿದೆ.

 

ಜಿಲ್ಲೆಯಲ್ಲಿ ಒಂದಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಇಂದು ಏಕಾಏಕಿ 60 ಜನರಲ್ಲಿ ಪತ್ತೆಯಾಗಿ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಈವರೆಗೆ163 ಇದ್ದ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿ 223 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ 7 ಸಾವಿರ ಜನರ ವರದಿ ಬರಬೇಕಿದ್ದು ಇನ್ನು ಎಷ್ಟು ಜನರಲ್ಲಿ ಸೋಂಕು ಪತ್ತೆಯಾಗಲಿದೆಯೋ ಎನ್ನುವ ಆತಂಕ ಮನೆ ಮಾಡಿದೆ. ಈವರೆಗೆ 9 ಜನರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಸೋಂಕಿಗೆ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.

Also Read  ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ - ಆ.17ಕ್ಕೆ 'ಗೃಹ ಲಕ್ಷ್ಮಿ' ಯೋಜನೆಯ 2000ರೂ ಜಮಾ

 

 

 

error: Content is protected !!
Scroll to Top