(ನ್ಯೂಸ್ ಕಡಬ) newskadaba.com ಬೆಟ್ಟಂಪಾಡಿ, ಮೇ. 29, ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿಯ ಮಿತ್ತಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಮಿತ್ತಡ್ಕ ದಿ. ಶೀನ ಪೂಜಾರಿಯವರ ಪತ್ನಿ ಲಲಿತಾ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯವರೆಗೆ ಮನೆಯಲ್ಲಿಯೇ ಇದ್ದ ಲಲಿತಾರವರು ಏಕಾಏಕಿ ಮನೆಯಲ್ಲಿ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದ ವೇಳೆ ಮನೆಯ ಸಮೀಪದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಉದಯರವಿ ಹಾಗೂ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.