ಜೂ. 1ರಿಂದ ಖಾಸಗಿ ಬಸ್‍ಗಳು ರಸ್ತೆಗೆ ➤ ದರ ಏರಿಕೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಮಂಗಳೂರು/ಉಡುಪಿ ಮೇ,29: ದ.ಕ ಜಿಲ್ಲೆಯಲ್ಲಿ ಸಿಟಿ ಬಸ್ಸ್ ಗಳು, ಸರ್ವೀಸ್ ಖಾಸಗಿ ಬಸ್ಗಳು, ಎಕ್ಸ್ ಪ್ರೆಸ್ ಖಾಸಗಿ ಬಸ್ ಗಳು ಜೂನ್ 1 ರಿಂದ ಸೀಮಿತ ಸಂಖ್ಯೆಯಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ ಪರಿಸತ್ತಿನೊಂದಿಗೆ ಭಾಗಶ: ಕಾರ್ಯಾರಂಭಿಸಲಿದೆ. ಸರ್ಕಾರ ಬಸ್ ಕಾರ್ಯಾಚರಣೆಗೆ ಈಗಾಗಲೇ ಅನುಮತಿ ನೀಡಿರುವ ನಿಟ್ಟಿನಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರ ನಡೆಸಿದ ದ.ಕ ಜಿಲ್ಲಾ ಬಸ್ ಮಾಲೀಕರ ಸಂಘದವರ ಸಭೆಯಲ್ಲಿ ಸೂಚನೆ ಸಿಕ್ಕಿದೆ. ಇನ್ನು ಬಸ್ಸಿನಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು.ಪ್ರತಿಯೊಬ್ಬ ಪ್ರಯಾಣಿಕ, ನಿರ್ವಾಹಕ್ಕ ಮತ್ತು ಚಾಲಕಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಇರಿಸಬೇಕೆಂದು ಷರತ್ತುಗಳನ್ನ ವಿಧಿಸಲಾಗಿದೆ

Also Read  ➤ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ➤ 5 ಸಾವು, ಹಲವರು ಗಂಭೀರ!

ಇನ್ನು ಮಂಗಳೂರು ಹಾಗೂ ಉಡುಪಿ ಮಧ್ಯೆ ಸರ್ವೀಸ್, ಎಕ್ಸ್ ಪ್ರೆಸ್ ಬಸ್ ಗಳ ಸಂಚಾರ ಜೂನ್ 1 ರಿಂದ ಶುರು ಮಾಡುವ ಬಗ್ಗೆ ಅಲೋಚನೆಗಳು ಇವೆ. ಆದರೆ ನಮಗಿನ್ನೂ ಸರ್ಕಾರದಿಂದ ಪರಿಷ್ಕ್ರತ ಟಿಕೆಟ್ ದರ ಬಂದಿಲ್ಲ ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ. ಹೊಸ ದರ ಬಾರದಿದ್ದರೆ, ನಾವೇ ದರ ಏರಿಕೆ ಮಾಡಿ ಬಸ್ ಸಂಚಾರ ಆರಂಭಿಸುವುದಾಗಿ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top