ಕೇರಳದ ರಾಜಕಾರಣಿ ಎಂ.ಪಿ. ವೀರೇಂದ್ರ ಕುಮಾರ್ ನಿಧನ ➤ ಧೀಮಂತ ನಾಯಕನಿಗೆ ಗಣ್ಯರಿಂದ ಸಂತಾಪ ವ್ಯಕ್ತ

(ನ್ಯೂಸ್ ಕಡಬ) newskadaba.com ತಿರುವನಂತಪುರಂ ಮೇ,29: ಕೇರಳ ರಾಜ್ಯದ ಧೀಮಂತ ರಾಜಕಾರಣಗಳಲ್ಲೊಬ್ಬರೆಂದು ಪರಿಗಣಿಸಲಾದ ಎಂ.ಪಿ. ವೀರೇಂದ್ರ ಕುಮಾರ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕನ್ನಡಿಗರಾದ 83 ವರ್ಷದ ವೀರೇಂದ್ರ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟರೆಂದು ಅವರು ಕುಟುಂಬ ಮೂಲಗಳು ಹೇಳಿದ್ಧಾಗಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

 

 

ಕೇರಳದ ಸಮಾಜವಾದಿ ಮುಖಂಡರಲ್ಲಿ ವೀರೇಂದ್ರ ಕುಮಾರ್ ಅಗ್ರಗಣ್ಯರೆನಿಸಿದ್ದಾರೆ. ಸಂಸದರು, ಕೇಂದ್ರ ಸಚಿವರಾಗಿ ಸಾಕಷ್ಟು ಜನಪ್ರಿಯರಾಗಿದ್ಧಾರೆ. ಎರಡು ದಿನಗಳ ಹಿಂದಷ್ಟೇ ಅವರು ಕೇರಳ ಸಿಎಂ ಪಿಣಾರಯಿ ವಿಜಯನ್ ಕೋವಿಡ್-19 ವಿಚಾರವಾಗಿ ನಡೆಸಿದ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಪಾಲ್ಗೊಂಡಿದ್ದರು. ವೀರೇಂದ್ರ ಕುಮಾರ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ಧಾರೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಜನಿಸಿದ ವೀರೇಂದ್ರ ಕುಮಾರ್ ಅವರು ಕನ್ನಡಿಗ ಜೈನ ಕುಟುಂಬದವರು. ಕೇರಳದಲ್ಲಷ್ಟೇ ಅಲ್ಲ ದಿಲ್ಲಿ ರಾಜಕೀಯ ವಲಯದಲ್ಲಿ ಸಾಕಷ್ಟು ಗೌರವ ಸಂಪಾದನೆ ಮಾಡಿದ್ಧಾರೆ. ಲೋಕತಾಂತ್ರಿಕ್ ಜನತಾ ದಳದ ಕೇರಳ ಘಟಕದ ಅಧ್ಯಕ್ಷರಾಗಿರುವ ಅವರು ‘ಮಾತೃಭೂಮಿ’ ಮಲಯಾಳಂ ಪತ್ರಿಕೆಯ ಎಂಡಿಯಾಗಿಯೂ ಕಾರ್ಯನಿರ್ವಹಿಸಿದ್ದರು.

Also Read  ಇಂದಿನಿಂದ‌ ಸಂಸತ್ ಬಜೆಟ್ ಅಧಿವೇಶನ ಆರಂಭ ➤ ಗರಿಕೆದರಿದ ನಿರೀಕ್ಷೆ

 

 

 

 

error: Content is protected !!
Scroll to Top