ಸುಳ್ಯಕ್ಕೆ ಮತ್ತೊಂದು ಆಘಾತ ➤ ಬೆಳ್ಳಾರೆ ನಿವಾಸಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.28. ಬೆಳ್ಳಾರೆ ಪೋಲಿಸ್ ಠಾಣಾ ಬಳಿಯ ಹಾಸ್ಟೆಲೊಂದರಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರಿಗೆ (35 ವ) ಸೋಂಕು ದೃಢಪಟ್ಟ ವರದಿ ಇಂದು ವರದಿಯಾಗಿದೆ.

ಮುಂಬೈನಲ್ಲಿ ಉದ್ಯೋಗಿಯಾಗಿರುವ ಇವರು ಮೂಲತಃ ಬೆಳ್ಳಾರೆ ಗ್ರಾಮದ ದರ್ಖಾಸಿನವರು. ಮೇ 21 ರಂದು ಊರಿಗೆ ಮರಳಿದ ಇವರನ್ನು ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಮೇ 25 ರಂದು ಇವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರ ಪರೀಕ್ಷಾ ವರದಿ ಇಂದು ಬಂದಿದ್ದು ಕೊರೋನಾ ಸೋಂಕು ದೃಢ ಪಟ್ಟಿರುತ್ತದೆ. ಇದರಿಂದ ಸುಳ್ಯ ತಾಲೂಕಿನಲ್ಲಿ ಸೋಂಕು ದೃಢಪಟ್ಟ ಎರಡನೇ ಕೇಸ್ ಇದಾಗಿದೆ.

Also Read  ಇನ್ನು ಮುಂದೆ ತೀರ್ಥ ಯಾತ್ರೆಗೂ ಆಧಾರ್ ಕಡ್ಡಾಯ ►ಯಾಕೆ ಅಂತಿರಾ...???

error: Content is protected !!
Scroll to Top