ಬೆಂಗಳೂರಿಗರೇ ಬೇಗ ಮನೆ ಸೇರಿಕೊಳ್ಳಿ ➤ ಇಂದೂ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಮೇ.28: ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಎರಡು ದಿನಗಳ ಕಾಲ ಸಿಡಿಲು, ಗುಡುಗು ಸಹಿತ ಭಾರೀ ಮಳೆ ಬೀಳಲಿದೆ ಎಂಬುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಅದರಂತೆ ಕಳೆದ ದಿನ  ಕೂಡ ಬೆಂಗಳೂರಿನಲ್ಲಿ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿತ್ತು. ಗಾಳಿ ಮಳೆಗೆ ಅನೇಕ ಮರಗಳು ಧರೆಗೆ ಉರುಳಿದ್ದವು. ಅಲ್ಲದೇ ಮರದಡಿಯಲ್ಲಿ ನಿಲ್ಲಿಸಲಾಗಿದ್ದಂತ ವಾಹನಗಳು ಜಖಂ ಕೂಡ ಆಗಿದ್ದವು. ಇಂದೂ ಕೂಡ ಭಾರಿ ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆ ಇದ್ದು, ಹೊರಗೆ ಇದ್ದರೇ, ಸಂಜೆಯೊಳಗೆ ಮನೆ ಸೇರಿಕೊಳ್ಳೋದು ಒಳಿತು.

 

ನಿನ್ನೆ ಬೆಂಗಳೂರಿನಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ ಅವಾಂತರವೇ ಉಂಟಾಗಿತ್ತು. ಇಂದು ಕೂಡ ಬೆಂಗಳೂರಿನಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಹೊರಗಿದ್ರೆ ಸಂಜೆಯೊಳಗೆ ಮನೆ ಸೇರಿಕೊಳ್ಳಿ. ಬೆಂಗಳೂರಿನಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆ ಇದೆ. ಇಂದು ಕೂಡ ಬಿರುಗಾಳಿ ಸಹಿತ ಭಾರಿ ಮಳೆ ಬರಲಿದೆಯಂತೆ. ಈ ಮೂಲಕ ಬೆಂಗಳೂರಿಗೆ ಈಗ ಮಳೆ ಡೇಂಜರ್ ಆಗಿ ಪರಿಣಮಿಸಿದೆ.

Also Read  ಉಡುಪಿ: ಅಗಲಿದ ಹಿರಿಯ ಚೇತನಗಳಿಗೆ ನುಡಿನಮನ, ಶ್ರದ್ಧಾಂಜಲಿ

 

 

 

 

error: Content is protected !!
Scroll to Top