(ನ್ಯೂಸ್ ಕಡಬ) newskadaba.com ಪುಲ್ವಾಮಾ,ಮೇ.28: ರಕ್ಷಣಾ ಪಡೆಯು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಅತಿದೊಡ್ಡ ಭಯೋತ್ಪಾದಕ ದಾಳಿ ವಿಫಲಗೊಳಿಸಿದೆ. ಯಾವ ಕಾರನ್ನು ರಕ್ಷಣಾ ಪಡೆ ತಡೆದಿತ್ತೋ ಅದರಲ್ಲಿ ಸುಮಾರು 20 ಕೆ. ಜಿಗೂ ಅಧಿಕ IED ಇತ್ತೆನ್ನಲಾಗಿದೆ. ಇನ್ನು ನಕಲಿ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕಾರನ್ನು ಗುರುವಾರದಂದು ಪೊಲೀಸರು ತಪಾಸಣೆಗೆ ತೆಡದಿದ್ದರು. ಆದರೆ ಈ ವೇಳೆ ಉಗ್ರರು ಕಾರನ್ನು ನಿಲ್ಲಿಸದೇ ಮತ್ತಷ್ಟು ವೇಗದಿಂದ ಡ್ರೈವ್ ಮಾಡಿ, ಬ್ಯಾರಿಕೇಡ್ ಮುರಿದು ತೆರಳಿತ್ತು. ಉಗ್ರ ಕೃತ್ಯದ ಹಿಂದೆ ಲಷ್ಕರ್ ಎ ತೋಯಿಬಾ ಅಥವಾ ಜೈಶ್ ಎ ಮೊಹಮದ್ ಕೈವಾಡ ಶಂಕೆ ವ್ಯಕ್ತವಾಗಿದೆ. ಪುಲ್ವಾಮಾದ ರಾಜಜ್ಪೊರಾದ ಆಯುನ್‍ಗುಂಡ್ ನಲ್ಲಿ ಸೇನೆ, CRPF ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಈ ಕಾರು ಸ್ಪೋಟ ಸಂಚನ್ನು ವಿಫಲಗೊಳಿಸಿದ್ದಾರೆ.
ಇನ್ನು ಭದ್ರತಾ ಪಡೆಗೆ ಸುಮಾರು 4-5 ದಿನಗಳ ಹಿಂದೆಯೇ ಕಾರೊಂದರಲ್ಲಿ ಸ್ಫೋಟ ಮಾಡಲು ಐಇಡಿ ಫಿಟ್ ಮಾಡಿ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಕಾರು ಸ್ಪೋಟಗೊಳಿಸಿ ಭದ್ರತಾ ಪಡೆಗಳ ಕ್ಯಾಂಪ್ ನಾಶ ಮಾಡುವುದು ಉಗ್ರರ ಉದ್ದೇಶವಾಗಿತ್ತು ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಲಭ್ಯವಾಗಿತ್ತೆನ್ನಲಾಗಿದೆ. ಇಂದು ಗುರುವಾರ ಬೆಳಗ್ಗೆ ದಕ್ಷಿಣ ಕಾಶ್ಮೀರದ ಪುಲ್ವಾಮಾದ ರಾಜ್ಪುರದ ಆಯನ್ಗುಂಡ್ ಹಳ್ಳಿಯ ರಸ್ತೆ ಬದಿಯೊಂದರಲ್ಲಿ ಈ ಸೆಂಟ್ ಕಾರು ನಿಂತಿರುವುದು ಕಂಡು ಬಂದಿತ್ತು. ಹೀಗಾಗಿ ಭದ್ರತಾ ಪಡೆ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಈ ಕಾರನ್ನು ಸುರಕ್ಷಿತವಾಗಿ ಸ್ಫೋಟಗೊಳಿಸಿವೆ. ಇನ್ನು ಕಾರಿಗೆ ಅಳವಡಿಸಲಾಗಿದ್ದ ಐಇಡಿ ಬೇರ್ಪಡಿಸಲು ಸಾಧ್ಯವಾಗದ ಕಾರಣ, ಇದನ್ನು ಸ್ಪೋಟಿಸಲಾಗಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.