(ನ್ಯೂಸ್ ಕಡಬ) newskadaba.com ಗೋರಖ್ ಪುರ,ಮೇ.27: ಇಡೀ ವಿಶ್ವವೇ ಕೊರೋನಾಕ್ಕೆ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ವೈರಸ್ ಭೀತಿಯಲ್ಲೆ ಜನ ಜೀವನ ನಡೆಸುತ್ತಿದ್ದಾರೆ. ಈ ವೈರಸ್ ಹರಡಲು ಮೂಲ ಕಾರಣ ಏನು ಎಂಬ ಗುಟ್ಟು ಮಾತ್ರ ಇನ್ನೂ ಬಹಿರಂಗವಾಗಿಲ್ಲ.ವೈರಸ್‍ನ ತವರು ಚೀನಾದ ಬಾವಲಿಗಳಿಂದಲೇ ಈ ವೈರಸ್ ಹರಡಿದೆ ಎಂಬ ವಾದಗಳೂ ಇವೆ.
ಹೌದು, ಅದೇನೇ ಇರಲಿ ಕೊರೋನಾ ವೈರಸ್ ಅಲ್ಲದಿದ್ದರೂ ಬಾವಲಿಗಳಿಂದ ಹರಡಿದ್ದ ನಿಫಾ ವೈರಸ್ ಕೂಡ ಭಾರತ ಸೇರಿದಂತೆ ಅನೇಕ ದೇಶಗಳನ್ನು ಬೆಚ್ಚಿಬೀಳಿಸಿದಂತು ನಿಜ. ಆದ್ರೇ ಇದೀಗಾ ಉತ್ರ ಪ್ರದೇಶದ ಗೋರಖ್ ಪುರದ ತೋಟವೋಂದರಲ್ಲಿ ಬಾವಲಿಗಳು ಸತ್ತು ಬಿದ್ದಿರುವುದು ಕಂಡು ಬಂದಿದ್ದು ಎಲ್ಲೆಡೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಗೋರಖ್ ಪುರ ಜಿಲ್ಲೆಯ ಬೆಲ್ಫಾಟ್ ಎಂಬ ಪ್ರದೇಶದಲ್ಲಿರುವ ಮಾವಿನ ತೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಬಾವಲಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ ಎಂದು ಮೂಲಗಳು ವರದಿ ಮಾಡಿದೆ. ಇನ್ನು ಮಾವಿನ ತೋಟಕ್ಕೆ ಬಳಸಿರುವ ಕೀಟನಾಶಕಗಳ ಸೇವನೆಯಿಂದಲೂ ಬಾವಲಿಗಳ ಸಾವೂ ಸಂಬವಿಸಿರಬಹುದು ಎಂದು ಅಂದಾಜಿಸಲಾಗಿದೆ.