ಇಂದಿನಿಂದ ಕಡಬ ಪಟ್ಟಣ ಪಂಚಾಯತ್ ➤ ಸರಕಾರದಿಂದ ಅಧಿಕೃತ ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಮೇ.28. ಕಡಬ ಮತ್ತು ಕೋಡಿಂಬಾಳ ಗ್ರಾಮಗಳನ್ನು ಒಳಗೊಂಡ ಕಡಬ ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿ ಸರಕಾರವು ಅಧಿಕೃತ ಆದೇಶ ಹೊರಡಿಸಿದೆ.

ಕಡಬ ಕೋಡಿಂಬಾಳ ಗ್ರಾಮದಲ್ಲಿ ಒಟ್ಟು 9546 ಜನಸಂಖ್ಯೆ ಇದ್ದು 18.70 ಕಿ.ಮೀ. ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಮೇ.27 ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಕಡಬ ಪಟ್ಟಣ ಪಂಚಾಯತ್ ಎಂದು ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯಾಧಿಕಾರಿ ನೇಮಕಕ್ಕೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಹೊಸ ಮುಖ್ಯಾಧಿಕಾರಿ ನೇಮಕಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕಡಬ ತಾಲೂಕು ಘೋಷಣೆ ಆದ ಬಳಿಕ ಕಡಬ ಪಟ್ಟಣ ಪಂಚಾಯತ್ ಆಗಿ ಮಾಡಬೇಕೆಂಬ ಪ್ರಸ್ತಾವನೆಯನ್ನು ಕಳುಹಿಸಲಾಗಿ ಕಡಬ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿ ಘೋಷಣೆಯಾಗಿತ್ತು. ಇದೀಗ ಮುಖ್ಯಾಧಿಕಾರಿ ನೇಮಕಕ್ಕೆ ಅಧಿಕೃತ ಆದೇಶ ಬಂದಿದೆ.

Also Read  ಮಕ್ಕಳ ಮದುವೆಗೆ ಅಡೆತಡೆಗಳು ಜಾಸ್ತಿಯಾಗಿದ್ದರೆ ಈ ಒಂದು ಕೆಲಸ ಮಾಡಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top