ಚಿರತೆ ದಾಳಿ ► ಯಜಮಾನನ ಪ್ರಾಣ ಉಳಿಸಿದ ಗೋಮಾತೆ

(ನ್ಯೂಸ್ ಕಡಬ) newskadaba.com ರಾಮನಗರ,ಮೇ27 : ಚಿರತೆಯ ದಾಳಿಗೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕ್ಕಿದ್ದ ತನ್ನ ಯಜಮಾನನ್ನು ತಾನೇ ಸಾಕಿದ ಗೋಮಾತೆ ರಕ್ಷಿಸಿದ ಘಟನೆಯೊಂದು ನಡೆದಿದೆ. ಆನೆಹೊಸಹಳ್ಳಿಯ ಮಾದೇಗೌಡರು ಎಂಬುವವರು ತಮ್ಮ ಜಮೀನಿನ ಪಕ್ಕದಲ್ಲೇ ಹಸು ಮೇಯುಸುತ್ತಿದ್ದ ವೇಳೆ ಏಕಾಏಕಿಯಾಗಿ, ಕಾಡಿನಿಂದ ಬಂದ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿದೆ.

 

 

 

 

ಪರಿಣಾಮ ಹಸುವನ್ನ ರಕ್ಷಿಸಲು ಹೋದ ಮಾದೇಗೌಡರ ಮೇಲೆ ಎಗರಿದ ಚಿರತೆ ಅವರನ್ನೇ ಕಚ್ಚಿ ಎಳೆದಾಡತೊಡಗಿತ್ತು. ತಕ್ಷಣ ತನ್ನ ಮಾಲೀಕ ಅಪಾಯಕ್ಕೆ ಸಿಲುಕಿರುವುದನ್ನು ಮನಗೊಂಡ ಹಸು ತನ್ನ ಕೊಂಬಿನಿಂದ ಚಿರತೆಯ ಮೇಲೆ ದಾಳಿ ನಡೆಸಿತ್ತು. ಹಸು ತಾಗೂ ಅದರ ಮಾಲೀಕನ ಸಂಘಟಿತ ದಾಳಿಯಿಂದ ಹೆದರಿದ ಚಿರತೆ ಕಾಡಿನೊಳಗೆ ಪಲಾಯನ ಮಾಡಿದೆ. ಸದ್ಯ ಮಾದೇಗೌಡರು ಹಾಗೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾದೇಗೌಡರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಮಾತೆಗೆ ಎಲ್ಲೆಡೆ ಪ್ರಶಂಷೆ ವ್ಯಕ್ತವಾಗಿದೆ. ಇನ್ನು ಚಿರತೆಯನ್ನು ಸೆರೆಹಿಡಿಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Also Read  ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು

 

 

 

 

error: Content is protected !!
Scroll to Top