(ನ್ಯೂಸ್ ಕಡಬ) newskadaba.com ಮೈಸೂರು,ಮೇ27: ಕೊರೋನಾ ಹಾವಳಿಯ ನಡುವೆಯು, ಸರ್ಕಾರ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೊಂಡು, ಆನೇಕ ನಿಯಮಗಳನ್ನು ಅನುಸರಿಸಿಕೊಂಡು ಮದ್ಯ ಪ್ರೀಯರ ಬೇಡಿಕೆಯಂತೆ ಮದ್ಯದಂಗಡಿಗಳನ್ನು ತೆರೆಯುವಂತೆ ಸೂಚನೆ ನೀಡಿತ್ತು. ಆದರೂ ಅಕ್ರಮ ಮದ್ಯ ಮಾರಾಟಕ್ಕೆ ಪಾರವೇ ಇರಲಿಲ್ಲ. ಎಲ್ಲಂದರಲ್ಲಿ ಮದ್ಯ ಪ್ರೀಯರು ನಾನಾ ಕಸರತ್ತು ಮಾಡಿ ಎಣ್ಣೆ ಖರೀದಿಗಾಗಿ ಮುಗಿಬೀಳುತ್ತಿದ್ದರು. ಆದರೆ ಇದೀಗಾ ಎಣ್ಣೆ ಕರಿದಿಸಲು ಕುಡುಕರು ಕಳ್ಳ ದಾರಿ ಪ್ರವೇಶಿಸಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಹೌದು “ಎಣ್ಣೆಗಾಗಿ” ಕೇರಳಿಗರು ಮೈಸೂರಿನ ಹೆಚ್. ಡಿ. ಕೋಟೆ ಗೆ ನದಿಯಲ್ಲಿ ಈಜಿ ಬರ್ತಿರೋದು ಪತ್ತೆಯಾಗಿದೆ. ಇದರಿಂದ ಮೈಸೂರು ಗಡಿ ಭಾಗದ ಜನ ಸೋಂಕು ತಗಲುವ ಭೀತಿಯಲ್ಲಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೆರಳಿಗರನ್ನು ತರಟೆಗೆ ತೆಗೆದುಕೊಂಡಿದ್ದಾರೆ.ಅಕ್ರಮ ಮದ್ಯ ಮಾರಟಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.