ಗೃಹ ಸಚಿವರಾಗಿ ರಾಮಲಿಂಗರೆಡ್ಡಿ ನೇಮಕ ► ರಮಾನಾಥ ರೈಗೆ ತಪ್ಪಿದ ಗೃಹ ಖಾತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.01. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯ ಗೃಹ ಸಚಿವ ಸ್ಥಾನಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದೆ.

ಗೃಹ ಸಚಿವ ಸ್ಥಾನಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ವಹಿಸಲಾಗಿದ್ದು, ರಮಾನಾಥ ರೈಯವರು ಗೃಹ ಸಚಿವರಾಗುತ್ತಾರೆ ಎನ್ನುವ ಹಲವು ದಿನಗಳ ಊಹಾಪೋಹಗಳಿಗೆ ತೆರೆಬಿದ್ದಿದೆ. ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ಎಚ್.ಎಂ.ರೇವಣ್ಣ ಅವರಿಗೆ ಸಾರಿಗೆ ಖಾತೆ, ಆರ್.ಬಿ.ತಿಮ್ಮಾಪೂರ್ ಅವರಿಗೆ ಅಬಕಾರಿ ಖಾತೆ, ಗೀತಾ ಮಹದೇವ ಪ್ರಸಾದ್ ಅವರಿಗೆ ಸಕ್ಕರೆ, ಸಣ್ಣ ಕೈಗಾರಿಕೆ ರಾಜ್ಯ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ. ಸಣ್ಣ ಕೈಗಾರಿಕಾ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಹಕಾರ ಖಾತೆಯನ್ನು ನೀಡಲಾಗಿದೆ.

Also Read  ಹಡೀಲು ಭೂಮಿಯಲ್ಲಿ ಸ್ವತಃ ನಾಟಿ ಮಾಡಿ ಗಮನ ಸೆಳೆದ ಶಾಸಕ ಖಾದರ್

ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಖಾತೆ ಜತೆಗೆ ಕೌಶಲ್ಯ ಅಭಿವೃದ್ಧಿಯನ್ನು ನೀಡಲಾಗಿದೆ. ಪ್ರಿಯಾಂಕ ಖರ್ಗೆ, ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ, ರುದ್ರಪ್ಪ ಲಮಾಣಿ ಅವರಿಗೆ ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ.

error: Content is protected !!
Scroll to Top