ನದಿಗೆ ಹಾರಿ ಆತ್ಮಹತ್ಯೆಗೈದವನ ರಕ್ಷಣೆಗೆ ಧುಮುಕಿದ್ದ ನೇತ್ರಾವತಿ ವೀರರು ➤ ಬೆಳ್ಳಾರೆ ಎಸ್ಕೆಎಸ್ಸೆಸ್ಸೆಫ್ ಹಾಗೂ ಶಂಸುಲ್ ಉಲಮಾ ಟ್ರಸ್ಟ್ ನಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.27. ಈದುಲ್ ಫಿತ್ರ್ ಹಬ್ಬದ ದಿನದಂದು ಬಂಟ್ವಾಳ ಸಮೀಪ ನೇತ್ರಾವತಿ ನದಿಗೆ ಯುವಕನೋರ್ವ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಜಾತಿಮತವನ್ನು ಲೆಕ್ಕಿಸದೆ ತನ್ನ ಪ್ರಾಣದ ಹಂಗನ್ನೇ ತೊರೆದು ಇಡೀ ದೇಶಕ್ಕೆ ಸೌಹಾರ್ದತೆ ಸಂದೇಶವನ್ನ ಸಾರಿದ ನೇತ್ರಾವತಿ ವೀರರಾದ ಆರೀಫ್, ಝಾಹಿದ್, ಮುಕ್ತಾರ್, ಸಮೀರ್, ತೌಸೀಫ್, ಹಫೀಝ್, ಮಹಮ್ಮದ್ ಇವರನ್ನು ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ವತಿಯಿಂದ ಸಮ್ಮಾನಿಸಲಾಯಿತು.

Also Read  "ಪ್ರಗತಿಯ ಪಕ್ಷ ಕರ್ನಾಟಕ" ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ► ಮತ್ತೆ ಜನಾರ್ದನ ಪೂಜಾರಿ ಕಣಕ್ಕೆ

ಈ ಸಂದರ್ಭದಲ್ಲಿ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ನ ಟ್ರಸ್ಟಿಗಳು, ಟ್ರಸ್ಟ್ ಸದಸ್ಯರು, ಎಸ್ಕೆಎಸ್ಸೆಸ್ಸೆಫ್ ನ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!
Scroll to Top