(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಲಾಕ್ ಡೌನ್ ಸಮಯದಲ್ಲಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಬಳಿ ಶುಲ್ಕವನ್ನು ಸಂಗ್ರಹಿಸಬಾರದೆಂದು ಸರ್ಕಾರ ಅದೇಶ ಹೊರಡಿಸಿದ್ದರೂ ಅದನ್ನೆಲ್ಲಾ ಲೆಕ್ಕಿಸದೇ ಮಂಗಳೂರಿನಲ್ಲಿರುವ ಬಹುತೇಕ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಪೊಷಕರಿಗೆ SMS ಮುಖಾಂತರ ಶುಲ್ಕವನ್ನು ಪಾವತಿಸಲು ಕಿರುಕುಳ ನೀಡುತ್ತಿರುವ ಕಾಲೇಜುಗಳ ವಿರುದ್ಧ ಪಾಂಡೆಮಿಕ್ ಡಿಸೀಸ್ ಆಕ್ಟ್ 1987ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊರೊನಾ ಲಾಕ್ ಡೌನ್ ನಿಂದ ಬಹುತೇಕ ಪೊಷಕರು ಕೆಲಸವಿಲ್ಲದೇ ಕಷ್ಟಪಡುತ್ತಿರುವಾಗ ಏಕಾಏಕಿಯಾಗಿ ಪೊಷಕರ ಬಳಿ ಶುಲ್ಕವನ್ನು ಪಾವತಿಸಲು ಒತ್ತಾಯಿಸುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಿಂದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಅಂತಹ ಕಾಲೇಜುಗಳ ವಿರುದ್ಧ ಪಾಂಡೆಮಿಕ್ ಡಿಸೀಸ್ ಆಕ್ಟ್ 1987ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಕಾರ್ಯದರ್ಶಿ ಭಾತಿಷ್ ಅಲಿಕೆಮಜಲು, ಜಿಲ್ಲಾದ್ಯಕ್ಷ ಗುರುದ್ದತ್ ಮಲ್ಲಿ, ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಾಟಿಪಳ್ಳ, ಶಾಫಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಮರ್ಧಾಳ ಜೊತೆಗಿದ್ದರು.