ಕರ್ನಾಟಕಕ್ಕೆ ಕೊರೋನಾ ಅಘಾತ ➤ ಒಂದೇ ದಿನ 100 ಮಂದಿಗೆ ವೈರಾಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ26: ಕರ್ನಾಟಕದಲ್ಲಿ ಕೊವೀಡ್ 19 ಅರ್ಭಟ ಮುಂದುವರಿದಿದೆ. ಹೌದು, ಇಂದು ಒಂದೇ ದಿನ 100 ಮಂದಿಯಲ್ಲಿ ಕೊರೋನಾ ವೈರಾಸ್ ಪಾಸಿಟಿವ್ ದೃಢ ಪಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆಯೂ 2,282 ರ ಗಡಿ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಿಂದ ತಿಳಿದು ಬಂದಿದೆ. ಇನ್ನು ಚಿತ್ರದುರ್ಗವೊಂದರಲ್ಲೇ ಇಂದು ಒಂದೇ ದಿನ 20 ಮಂದಿಗೆ ಕೊರೋನಾ ವಕ್ಕರಿಸಿದೆ. ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಕೋವಿಡ್-19 ಪ್ರಕರಣಗಳು ದಾಖಲಾಗಿದೆ.

 

 

 

2,282 ಸೋಂಕಿತರ ಪೈಕಿ ಇಂದು 17 ಮಂದಿ ಸೇರಿದಂತೆ ಒಟ್ಟು 722 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 1514 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ ಮೂಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಜಾರ್ಖಾಂಡ್ ನಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮುಖ್ಯವಾಗಿದೆ. ಇನ್ನು ಈ ಕೊರೋನ ವೈರಾಣು ಇದುವರೆಗೆ ರಾಜ್ಯದಲ್ಲಿ 44 ಮಂದಿಯನ್ನ ಬಲಿ ಪಡೆದುಕೊಂಡಿದೆ.

Also Read  ಬಳ್ಳಾರಿ: ಹಕ್ಕಿಜ್ವರ ಪತ್ತೆ- ಸಾವಿರಾರು ಕೋಳಿಗಳು ಸಾವು

 

 

 

error: Content is protected !!
Scroll to Top