ಉಡುಪಿಯಲ್ಲಿಂದು 3ಮಂದಿಗೆ ಕೊರೋನಾ ಪಾಸಿಟಿವ್ ➤ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ,ಉಡುಪಿ ಮೇ26: ರಾಜ್ಯದಲ್ಲಿ ಕೊರೋನ ವೈರಸ್ ತಾಂಡವಾಗುತ್ತಲೆ ಇದೆ. ಗ್ರೀನ್ ಝೋನ್ ನಲ್ಲಿ ಸೇಫ್ ಆಗಿದ್ದ ಕೃಷ್ಣನಗರಿಗೆ ಇದ್ದಕ್ಕಿದ್ದಂತೆ ಕೊರೋನಾ ಅಪ್ಪಳಿಸಿದ್ದು, ಉಡುಪಿ ಜಿಲ್ಲೆಯನ್ನು ಮಾತ್ರ ಕಳೆದ ದಿನಗಳಿಂದ ಬೆಂಬಿಡದೆ ಕಾಡುತ್ತಿದೆ.

 

 

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇಂದು(ಮಂಗಳವಾರ) ಮತ್ತೆ ಉಡುಪಿ ಜಿಲ್ಲೆಗೆ ವಕ್ಕರಿಸಿದ ಕೊರೋನಾ ವೈರಾಸ್, 3ಮಂದಿಯಲ್ಲಿ ಕೋವಿಡ್ -19 ಪಾಸಿಟಿವ್ ದೃಡ ಪಟ್ಟಿದೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 111ಕ್ಕೆರೀದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದ 27 ವರ್ಷ ಪುರುಷ, 30 ವರ್ಷದ ಮಹಿಳೆ ಹಾಗೂ 9 ವರ್ಷದ ಬಾಲಕಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು, ಸೋಂಕಿತರನ್ನ ಕೋವಿಡ್ ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಲಿದೆ.

Also Read  ಇಂದು ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಸವಣೂರಿನಲ್ಲಿ ಪತ್ರಿಕಾ ದಿನಾಚರಣೆ

 

 

 

 

 

 

error: Content is protected !!
Scroll to Top