ಕೊಡಗಿನಲ್ಲಿ ಹುಲಿ ದಾಳಿ ➤ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಮಡಿಕೇರಿ, ಮೇ26: ಕೊಡಗಿನಲ್ಲಿ ಇತ್ತೀಚೆಗಷ್ಟೆ ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಹುಲಿಯೊಂದನ್ನ ಸೆರೆಹಿಡಿದು ಸಖತ್ ಸುದ್ದಿಯಾಗಿತ್ತು. ಸ್ವಲ್ಪ ಮಟ್ಟಿಗೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗಾ ಜಾನುವರುಗಳ ಮೇಲೆ ಮತ್ತೊಂದು ಹುಲಿ ದಾಳಿ ನಡೆಸಿದ ಪ್ರಕರಣ ಸುದ್ದಿಯಾಗಿದೆ.

 

 

ಕೊಡಗಿನ ಪೊನ್ನಂಪೇಟೆ ಸಮೀಪದ ಚಿಕ್ಕಮುಂಡೂರು ಗ್ರಾಮದ ನಿವೃತ್ತ ಪೋಸ್ಟ್ ಮಾಸ್ಟರ್ ಕಳ್ಳಿಚಂಡ ಜಗದೀಶ್ (ರಘು) ಆವರಿಗೆ ಸೇರಿದ ಹಸುವನ್ನು ಸಮೀಪದ ತೋಟಕ್ಕೆ ಕೊಂಡೊಯ್ಯುದ ಹುಲಿ ಹಸುವನ್ನ ಕೊಂದು ಹಾಕಿದೆ. ಎರಡು ದಿನದ ಹಿಂದೆಯೇ ಈ ಘಟನೆ ನಡೆದಿದ್ದು, ಸನಿಹದ ತೋಟದಲ್ಲಿ ಕಳೇಬರಹ ಪತ್ತೆಯಾಗಿದೆ. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕಮುಂಡೂರು ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಾಗಾಗಿದ್ದಾರೆ.

Also Read  ಗೋಳಿತ್ತಡಿ: ಭಿನ್ನ ಕೋಮಿನ ಜೋಡಿಗೆ ತಂಡದಿಂದ ಹಲ್ಲೆ

 

 

 

 

 

 

error: Content is protected !!
Scroll to Top