ಕರ್ನಾಟಕದಲ್ಲಿ ಸಂಡೇ ಲಾಕ್ ಡೌನ್ ರಿಲೀಫ್ ➤ ಮತ್ತೆ ಸಹಜ ಸ್ಥಿತಿಯತ್ತ ಜನ ಜೀವನ

(ನ್ಯೂಸ್ ಕಡಬ) newskadaba.com ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ 36 ಗಂಟೆ ಕಫ್ರ್ಯೂ ಮಾದರಿ ಸಂಡೇ ಲಾಕ್ ಡೌನ್ ಮುಕ್ತಾಯವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆಯ ವರಗೂ ಕಫ್ರ್ಯೂ ಮಾದರಿ ಸಂಡೇ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು.

 

ಇಂದು ಬೆಳಗ್ಗೆ 7 ಗಂಟೆಯ ವೇಳೆಗೆ ಲಾಕ್ ಡೌನ್ ಮುಕ್ತಾಯಗೊಂಡಿದೆ. ಎಂದಿನಂತೆಯೇ ಇಂದಿನಿಂದ ಸಹಜ ಸ್ಥಿತಿಯತ್ತ ಜನ ಜೀವನ ಮರಳಿದೆ. ಇನ್ನು ಇಂದಿನಿಂದ ಮುಂದಿನ ಶನಿವಾರದ ಸಂಜೆ 7ಗಂಟೆಯ ವರೆಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಜತೆಗೆ ಅಗತ್ಯ ವಸ್ತುಗಳಿಗಾಗಿ ಎಲ್ಲಾ ರೀತಿಯ ಅಂಗಡಿ ಮಗಂಟ್ಟು ಗಳು ಓಪನ್ ಆಗಲಿವೆ. ಇದರ ಜೊತೆಗೆ ಬಸ್, ಆಟೋ, ಟ್ಯಾಕ್ಸಿ , ರೈಲು ಸಂಚಾರವೂ ಶುರುವಾಗಿದೆ. ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಕಫ್ರ್ಯೂ ಜಾರಿಯಲ್ಲಿರುತ್ತದೆ.

Also Read  ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಪೊಲೀಸ್ ವಶಕ್ಕೆ ➤ 10ನೇ ತರಗತಿ ವಿದ್ಯಾರ್ಥಿಯ ಪ್ಲಾನ್ ಗೆ ಬೆಚ್ಚಿಬಿದ್ದ ಜನತೆ

 

 

 

 

error: Content is protected !!
Scroll to Top