ಭಾರತಕ್ಕೆ ಕೊರೋನಾ ಕಂಟಕ ➤ ಒಂದೇ ದಿನ 6977 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ದೆಹಲಿ. ಮೇ.25, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯು ಏರಿಕೆ ಕಂಡಿದ್ದು, ಇದರನ್ವಯ ಸತತ 3ನೇ ದಿನ ಕೂಡ ಭಾರತದಲ್ಲಿ 6000ಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಕೇಸ್ ಪತ್ತೆಯಾಗಿದೆ. ಇಂದು (ಸೋಮವಾರ) ದಾಖಲೆಯ 6,977 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,38,845ಕ್ಕೆ ಏರಿಕೆಯಾಗಿದೆ.

ಇದರ ಜೊತೆಗೆ, 24 ಗಂಟೆಯಲ್ಲಿ ಕೊರೋನಾ ವೈರಸ್ 154 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಇದರಿಂದ ಸಾವಿನ ಸಂಖ್ಯೆ 4021ಕ್ಕೆ ಏರಿಕೆಯಾಗಿದೆ. ಒಂದೇ ದಿನ 6,977 ಮಂದಿಯಲ್ಲಿ ವೈರಸ್ ಪತ್ತೆಯಾಗಿರುವುದು ಈ ವರೆಗಿನ ಗರಿಷ್ಟ ಪ್ರಮಾಣವಾಗಿದೆ.

Also Read  ➤ ಮಾನಸಿಕ ಖಿನ್ನತೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಕುಮಾರಧಾರ ನದಿ ತೀರದಲ್ಲಿ ಶವವಾಗಿ ಪತ್ತೆ!

 

 

error: Content is protected !!
Scroll to Top