ಕಾರ್ಕಳದ ಇಬ್ಬರು ಪೊಲೀಸರಲ್ಲಿ ಕೊರೋನ ದೃಢ: ನಾಲ್ಕು ಕಚೇರಿ ಸೀಲ್‌ಡೌನ್

ಉಡುಪಿ, ಮೇ 24: ಅಜೆಕಾರು ಠಾಣೆಯ ಎಎಸ್‌ಐ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಕಾನ್ಸ್‌ಟೇಬಲ್ ಗೆ ಕೊರೊನಾ ದೃಢಪಟ್ಟಿದೆ.

ಪೊಲೀಸರಿಬ್ಬರಿಗೆ ಕೊರೋನ ದೃಢಪಟ್ಟ ಹಿನ್ನಲೆ ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆ, ಕಾರ್ಕಳ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ, ಅಜೆಕಾರು ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಪೊಲೀಸ್‌ ಕಾನ್ಸ್‌ಟೇಬಲ್ ಹಾಗೂ ಎಎಸ್ಸೈ ಕೊರೋನ ದೃಢಪಟ್ಟ ಹಿನ್ನಲೆಯಲ್ಲಿ ಒಟ್ಟು 80 ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಕೊರೋನ ದೃಢಪಟ್ಟ ಇಬ್ಬರು ಪೊಲೀಸ್‌ ಸಿಬ್ಬಂದಿ ಚೆಕ್‌ಪೋಸ್ಟ್‌ ಹಾಗೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ಇಬ್ಬರಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

Also Read  ಮಣಿಪಾಲ :ಆರ್ಥಿಕ ಸಮಸ್ಯೆಯಿಂದ ಆತ್ಯಹತ್ಯೆಗೆ ಶರಣಾದ ಟ್ಯಾಕ್ಸಿ ಚಾಲಕ

error: Content is protected !!
Scroll to Top