ಉಡುಪಿ ಜಿಲ್ಲೆಯಲ್ಲಿ ಮೇ 24ರಂದು ಸಂಪೂರ್ಣ ಲಾಕ್‌ಡೌನ್: ಡಿಸಿ ಜಗದೀಶ್

ಉಡುಪಿ, ಮೇ 23: ಜಿಲ್ಲೆಯಲ್ಲಿ ಶನಿವಾರ ಸಂಜೆ 7ರಿಂದ 36 ಗಂಟೆಗಳ ಲಾಕ್‌ಡೌನ್ ಜಾರಿಗೊಳಿಸಲಾಗುತ್ತಿದ್ದು, ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಠಿಣ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ 36 ಗಂಟೆಗಳ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Also Read  ನಾಳೆಯಿಂದ ಲೋಕಾಯುಕ್ತರ ದ.ಕ ಜಿಲ್ಲಾ ಪ್ರವಾಸ

ಈ 36 ಗಂಟೆಗಳ ಲಾಕ್‌ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧ ಅಂಗಡಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಇದರ ಹೊರತು ಇತರೇ ಯಾವುದೇ ಚಟುವಟಕೆಗಳಿಗೆ ಅನುಮತಿ ಇಲ್ಲ. ವಿವಾಹ ಸಮಾರಂಭಕ್ಕೂ ಅನುಮತಿ ಕಡ್ಡಾಯವಾಗಿದ್ದು, ಈಗಾಗಲೇ ತಹಶೀಲ್ದಾರ್ ಅವರಿಂದ ಮದುವೆಗೆ ಅನುಮತಿ ಪಡೆದಿಕೊಂಡಿರುವವರು ಮದುವೆ ಮಾಡಬಹುದು ಎಂದರು.

error: Content is protected !!
Scroll to Top