ಮಂಗಳೂರು: 65 ಕ್ಕೇರಿದ ಸೋಂಕಿತರ ಸಂಖ್ಯೆ ➤ ಬೆಳ್ತಂಗಡಿಯ ಮಹಿಳೆ ಹಾಗೂ ಮಂಗಳೂರಿನ ಯುವಕನಲ್ಲಿ ಕೊರೊನಾ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ 23. ದ.ಕ. ಜಿಲ್ಲೆಯಲ್ಲಿ ಶನಿವಾರ ಮತ್ತೆ ಎರಡು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 65ಕ್ಕೇರಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 41ರ ಹರೆಯದ ಮಹಿಳೆಗೆ ಸೋಂಕು ತಗಲಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಇವರ ಗಂಟಲಿನ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿವೆ.

ಮುಂಬೈಯಿಂದ ಬಂದು ಮಂಗಳೂರಿನ ಕ್ವಾರಂಟೈನ್‌ನಲ್ಲಿದ್ದ 30 ವರ್ಷ ಪ್ರಾಯದ ಯುವಕನಿಗೂ ಸೋಂಕು ಇರುವುದು ಶನಿವಾರ ದೃಢಗೊಂಡಿವೆ. ಮುಂಬೈಯಿಂದ ಬಂದಿದ್ದ ಇವರು ಜಿಲ್ಲಾಡಳಿತ ವತಿಯಿಂದ ಸಿದ್ಧಪಡಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇವರ ಗಂಟಲಿನ ದ್ರವದ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಇರುವುದು ಬೆಳಕಿಗೆ ಬಂದಿದೆ.

Also Read  ಕರಾವಳಿ ಕಾಂಗ್ರೆಸ್ ನಾಯಕರ ಕಚ್ಚಾಟ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಸ್ಪೋಟ ► ನೂಕಾಟ ತಳ್ಳಾಟಕ್ಕೆ ಸುಸ್ತಾದ ಪೊಲೀಸರು

error: Content is protected !!
Scroll to Top