ರಾಜ್ಯದಲ್ಲಿ ಇಂದು 138 ಹೊಸ ಕೊರೋನ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆ

ಬೆಂಗಳೂರು, ಮೇ 22: ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ 3, ಧಾರವಾಡ 2, ತುಮಕೂರು 8, ಚಿಕ್ಕಬಳ್ಳಾಪುರ 47, ಮಂಡ್ಯ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ಬೀದರ್ 9, ಹಾಸನದಲ್ಲಿ 14, ವಿಜಯಪುರ 2, ದಾವಣಗೆರೆ 4 ಪ್ರಕರಣಗಳು ವರದಿಯಾಗಿವೆ, ಬಾಗಲಕೋಟೆ, ಚಿತ್ರದುರ್ಗ ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 138 ಪ್ರಕರಣ ವರದಿಯಾಗಿವೆ.

Also Read  ನವೆಂಬರ್ ನಿಂದ ನಮ್ಮ ಮೆಟ್ರೋ ಪ್ರಯಾಣ ದರ ಶೇ 20ಕ್ಕೆ ಹೆಚ್ಚಳ..!?

ಇಂದಿನ ಸೋಂಕಿತರಲ್ಲಿ ಬಹುತೇಕರು ಮುಂಬೈನಿಂದ ಆಗಮಿಸಿದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

error: Content is protected !!
Scroll to Top